ಇಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಭಾರತದಲ್ಲಿ ವಾರ್ಷಿಕವಾಗಿ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವಾಗಿ ಆಚರಿಸಲಾಗುತ್ತದೆ, ಪ್ರತಿ ವರ್ಷ ದೇಶದಲ್ಲಿ 1.1 ಮಿಲಿಯನ್ ಕಾನ್ಸರ್ ಪ್ರಕರಣಗಳು ವರದಿಯಾಗುತ್ತವೆ. ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಮೊದಲ ಬಾರಿಗೆ ಸೆಪ್ಟೆಂಬರ್ 2014 ರಲ್ಲಿ ಅಂದಿನ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಅವರು ಘೋಷಿಸಿದರು,
ನವೆಂಬರ್ 7 ರಂದು 1867 ರಲ್ಲಿ ಇದೇ ದಿನಾಂಕದಂದು ಜನಿಸಿದ ನೊಬೆಲ್ ಪ್ರಶಸ್ತಿ ವಿಜೇತ ಮೇರಿ ಕ್ಯೂರಿ ಅವರ ಜನ್ಮದಿನವನ್ನ ಆಯ್ಕೆಮಾಡಲಾಯಿತು. ಮೇರಿ ಕ್ಯೂರಿ, ಕ್ಯಾನ್ಸರ್ ಚಿಕಿತ್ಸೆಗಾಗಿ ರೇಡಿಯೊಥೆರಪಿ ಚಿಕಿತ್ಸೆಯನ್ನ ಅಭಿವೃದ್ಧಿ ಪಡಿಸಿದ ಕಾರಣ ಅವರ ಸ್ಮರಣಾರ್ಥಾ ವಿಶ್ವ ಕ್ಯಾನ್ಸರ್ ಜಾಗೃತಿ ದಿನವನ್ನ ಚರಿಸಲಾಗುತ್ತಿದೆ.
1975 ಈ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಟ ಪ್ರಾರಂಭವಾಯಿತು, ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ರಾಷ್ಟ್ರದಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನ ಸರಕಾರ ಹಮ್ಮಿಕೊಂಡಿತು . 10 ವರ್ಷಗಳ ನಂತರ 1984-85 ರಲ್ಲಿ ಯೋಜನೆಯ ಪರಿಷ್ಕರಿಸಲಾಯಿತು. ಕ್ಯಾನ್ಸರ್ ನ್ನ ಆರಂಭಿದಲ್ಲಿ ಪತ್ತೆ ಹಚ್ಚುವುದು ಮತ್ತು ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸಲಾಯಿತು.
ಭಾರತದಲ್ಲಿ, ಕ್ಯಾನ್ಸರ್ ರೋಗವನ್ನ ಆರಂಭದಲ್ಲಿಯೇ ಪತ್ತೆಹಚ್ಚುವ ಅಗತ್ಯವಿದೆ. ಹೆಚ್ಚಿನ ಪ್ರಕರಣಗಳು ಈಗಾಗಲೇ ಕ್ಯಾನ್ಸರ್ ಮುಂದುವರಿದ ಹಂತದಲ್ಲಿದ್ದಾಗ ಪತ್ತೆಯಾದ ಪ್ರಕರಣಗಳಾಗಿವೆ. ಇದು ಬದುಕುಳಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.







