ತೆಲುಗು ಸ್ಟಾರ್ ನಟ ನಾಗ ಶೌರ್ಯ ತಂದೆ ಅರೆಸ್ಟ್ – ಜಾಮೀನಿನ ಮೇಲೆ ರಿಲೀಸ್
ಹೈದ್ರಾಬಾದ್ : ಇತ್ತೀಚೆಗೆ ತೆಲುಗಿನ ಸ್ಟಾರ್ ನಟ ನಾಗ ಶೌರ್ಯ ಅವರಿಗೆ ಸೇರಿದ ತೋಟದ ಮನೆಯಲ್ಲಿ ಅಕ್ರಮ ಜೂಜು ದಂಧೆಯ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಭಾರೀ ಮೊತ್ತದ ನಗುದು ಸೇರಿದಂತೆ ಇತರೇ ವಸ್ತುಗಳ ವಶಕ್ಕೆ ಪಡೆದಿದ್ದರು. ಇದೇ ಪ್ರಕರಣದಲ್ಲಿ ನಾಗಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು..
ನಾಗ ಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್ ಮತ್ತು ಪ್ರಮುಖ ಆರೋಪಿ ಗುತ್ತಾ ಸುಮನ್ ಚೌಧರಿ ಅವರು ಭೋಗ್ಯಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾದ ಮಂಚಿರೇವುಳ ಫಾರ್ಮ್‌ಹೌಸ್‌ನಲ್ಲಿ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಒಟಿ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಈ ನಡುವೆ ನಾಗ ಶೌರ್ಯ ತಂದೆಯನ್ನ ಜಾಮೀನಿನ ಮೇಲೆ ರಿಲೀಸ್ ಮಾಡಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆ ನಂತರ ಶಿವಲಿಂಗ ಪ್ರಸಾದ್, ಕಿಂಗ್ ಪಿನ್ ಗುತ್ತಾ ಸುಮನ್ ಜೊತೆ ಅಕ್ರಮವಾಗಿ ಜೂಜು ದಂಧೆ ನಡೆಸುತ್ತಿದ್ದರು ಎಂಬುದಕ್ಕೆ ಕೆಲ ಸಾಕ್ಷಿಗಳು ಸಿಕ್ಕಿದೆ ಎನ್ನಲಾಗಿದೆ.. ಹೀಗಾಗಿ ಪೊಲೀಸರು ಶಿವವಿಂಗರನ್ನ ಬಂಧಿಸಿ, ಉಪ್ಪರಪಳ್ಳಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದೇ ವೇಳೆ ಶಿವಲಿಂಗ ಪ್ರಸಾದ್ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ನಂತರ ಶಿವಲಿಂಗ ಪ್ರಸಾದ್ ಗೆ ಜಾಮೀನು ಸಿಕ್ಕಿದೆ ಎಂದು ವರದಿಯಾಗಿದೆ.. ಈ ಪ್ರಕರಣದ ಬಗ್ಗೆ ನಟ ನಾಗ ಶೌರ್ಯ ಇನ್ನೂವರೆಗೂ ಸಹ ಪ್ರತ್ರಿಕ್ರಿಯೆ ನೀಡಿಲ್ಲ.