ಪ್ರೀತಿ ನಿರಾಕರಿಸಿದ ಯುವತಿ. 18 ಭಾರಿ ಚಾಕುವಿನಿಂದ ಚುಚ್ಚಿ ಹಲ್ಲೆ
ತಾನು ಪ್ರೀತಿಸುತ್ತಿದ್ದ ಯುವತಿ ಮದುವೆಯಾಗಲು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಚಾಕುವಿನಿಂದ 18 ಭಾರಿ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ವಿಕಾರಾಬಾದ್ ಜಿಲ್ಲೆಯ ದೌಲ್ತಾಬಾದ್ ತಾಲೋಕಿನ ಗ್ರಾಮದ 20 ವರ್ಷದ ಯುವತಿ ಮತ್ತು ತಿಮ್ಮರೆಡ್ಡಿ ಪಲ್ಲಿ ಗ್ರಾಮದ 23 ವರ್ಷದ ಬಸವರಾಜ್ ಎನ್ನುವ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಇದು ಮನೆಯವರಿಗೆ ತಿಳಿದ ನಂತರ ಇಬ್ಬರ ಮದುವೆಗೆ ನಿರಾಕರಿಸಿ ಹುಡುಗಿಗೆ ಬೇರೊಂದು ಮದುವೆ ಮಾಡಲು ನಿರ್ಧರಿಸಿದರು.
ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ವಯಿಸಿದ ಪೋಷಕರ ಯುವತಿಯನ್ನ ಹೈದರಾಬಾದ್ ನ ಎಲ್ ಬಿ ನಗರದ ಚಿಕ್ಕಪ್ಪನ ಮನೆಯಲ್ಲಿ ಇಟ್ಟಿದ್ದರು.
ಇದರಿಂದ ನೊಂದಕೊಂಡಿದ್ದ ಆಕೆಯ ಪ್ರಿಯಕರ ಹೈದರಾಬಾದ್ ನ ಯುವತಿಯ ಮನೆಯ ಹತ್ತಿರ ಹೋಗಿದ್ದಾನೆ. ಆಕೆಯ ಮೊಬೈಲ್ ಗೆ “ಕೊನೆಯ ಭಾರಿ ಬೇಟಿಯಾಗಿ ಮಾತನಾಡೋಣ” ಎಂದು ಸಂದೇಶ ಕಳಿಸಿದ್ದಾನೆ. ಅದರಂತೆ ಯುವತಿ ನಂಬಿ ಅವನನ್ನ ಬೇಟಿ ಮಾಡಲು ಹೋಗಿದ್ದಾಳೆ.
ಯುವತಿ ಮನೆಯಿಂದ ಹೊರ ಬಂದ ನಂತರ ನನ್ನನ ಬಿಟ್ಟು ಹೊಗದಂತೆ, ಮದುವೆ ಮಾಡಿಕೊಳ್ಳುವಂತೆ ಬಸವರಾಜ್ ವಿನಂತಿಸಿಕೊಂಡಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಚಾಕುವಿನಿಂದ ಮನಸೋ ಇಚ್ಚೆ ಯುವತಿಯನ್ನ ತಿವಿದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಇದನ್ನ ಗಮನಿಸಿದ ಅಕ್ಕ ಪಕ್ಕದ ಮನೆಯವರು ಯುವತಿಯ ಸಹಾಯಕ್ಕಾಗಿ ಧಾವಿಸಿದ್ದಾರೆ. ರಕ್ತ ಸಿಕ್ತವಾಗಿದ್ದ ಹುಡುಗಿಯನ್ನ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಧ್ಯ ಆಸ್ಪತ್ರೆಯ ವೈದ್ಯರು ಆಕೆಯ “ಸ್ಥಿತಿ ಗಂಭೀರವಾಗಿದೆ 48 ಗಂಟೆಯ ವರೆಗೆ ಏನೂ ಹೇಳಲೂ ಸಾಧ್ಯವಿಲ್ಲ” ಎಂದು ತಿಳಿಸಿದರೆ.
ಈ ಘಟನೆ ಕುರಿತು ಎಲ್ಬಿ ನಗರ ಪೊಲೀಸ್ ಠಾಣೆಯಲ್ಲಿ (LB Nagar police station) ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಬಸವರಾಜ್ನನ್ನು (Basavaraj) ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.








