ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ ಎಂದು ಆತ್ಮಹತ್ಯೆಗೆ ಯತ್ನಿಸಿದ ಪಟ್ಟಣ ಪಂಚಾಯ್ತಿ ಸದಸ್ಯೆ..!
ಚಿಕ್ಕಮಗಳೂರು : ಪಟ್ಟಣ ಪಂಚಾಯ್ತಿ ಸದಸ್ಯೆಯೊಬ್ರು ತಮ್ಮ ಸಾವಿಗೆ ಪಕ್ಷದ ಮುಖಂಡರೇ ಕಾರಣ ಎಂದು ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರಿನ ಎನ್ ಆರ್ ಪುರದಲ್ಲಿ ನಡೆದಿದೆ..
ಜುಬೇದ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದಾರೆ.. ಇವರು ಎನ್ ಆರ್ ಪುರ ತಾಲೂಕಿನ ಮುನ್ಸಿಪಾಲಿಟಿ ಮೆಂಬರ್ ಆಗಿದ್ದಾರೆ.. ಅಧ್ಯಕ್ಷ ಸ್ಥಾನ ಬಿಟ್ಟುಕೊಡದಕ್ಕೆ ಮನನೊಂದಿದ್ದ ಇವರು ಐದಾರು ಬಗೆಯ ನಿದ್ರೆ ಮಾತ್ರಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಾಲಿ ಅಧ್ಯಕ್ಷೆ ಸುರಯ್ಯಭಾನು ನ.7 ರಂದು ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಒಳ ಒಪ್ಪಂದಂತೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಸುರಯ್ಯಭಾನು ಯೂ ಟರ್ನ್ ಹೊಡೆದು ನಾನು ಆಶ್ರಯ ಸಮಿತಿ ಸಭೆ ಹಾಗೂ ಬಜೆಟ್ ಸಭೆ ನಡೆಸಿಯೇ ರಾಜೀನಾಮೆ ನೀಡುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಇತ್ತ ಪಕ್ಷದ ಕೆಲ ಮುಖಂಡರುಗಳು ಜುಬೇದರನ್ನ ಅಧ್ಯಕ್ಷೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಪಕ್ಷ ಕ್ಯಾರೇ ಎನ್ನದೆ ಜುಬೇದ ಅಧ್ಯಕ್ಷೆ ಸ್ಥಾನಕ್ಕೆ ಅಡ್ಡಗಾಲು ಹಾಕಿದ್ದರು ಎನ್ನಲಾಗಿದೆ.
ಜುಬೇದಗೆ ಅಧ್ಯಕ್ಷ ಸ್ಥಾನ ನೀಡಲು ವಿಳಂಬವಾಗಿದ್ದರಿಂದ ಮನನೊಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಕೂಡಲೇ ಎನ್.ಆರ್.ಪುರ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ.
ಒಟ್ಟಾರೆಯಾಗಿ ಕಾಂಗ್ರೆಸ್ ಮುಖಂಡರಲ್ಲೇ ಜುಬೇದ ಅವರನ್ನು ಅಧ್ಯಕ್ಷೆ ಮಾಡಲು ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ.








