ಕೋವಿಡ್ ಲಸಿಕೆಗೆ ಪಡೆಯದವರಿಗೆ ಶಾಕ್ – ನೀರು ವಿದ್ಯುತ್ ಸ್ಥಗಿತ
ಕರೋನ ಲಸಿಕೆ ಪಡೆಯದಿರು ಕಾರಣಕ್ಕೆ ಮನೆಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನ ಸ್ಥಗಿತಗೊಳಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಕೊವಿಡ್ ಲಸಿಕೆ ಕುರಿತು ಎಷ್ಟೇ ಜಾಗೃತಿ ಅಭಿಯಾನಗಳನ್ನು ಮಾಡಿದರೂ ಜನರು ಮಾತ್ರ ಲಸಿಕೆ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಪಾವಗಡ ಪಟ್ಟಣದ ಕನುಮಲಚೆರವು ಗ್ರಾಮದ ಜನತೆ ಕರೋನಾ ಲಸಿಕೆ ತೆಗೆದುಕೊಳ್ಳುವಲ್ಲಿ ಸಹಕಾರ ನೀಡದ ಕಾರಣ ಆರೋಗ್ಯ ಸಿಬ್ಬಂದಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ
ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ತುಮಕೂರು ಅಧಿಕಾರಿಗಳು ಹೊಸ ಪ್ರಯೋಗ ಮಾಡಿದ್ದು, ಬಡಾವಣೆಯಲ್ಲಿ ನೀರು ಮತ್ತು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. 40 ಕ್ಕೂ ಹೆಚ್ಚು ಮನೆಗಳ ಜನರು ಕೊವಿಡ್ ಲಸಿಕೆ ಹಾಕಿಕೊಳ್ಳಲು ನಿರಾಕರಿಸಿದ್ದರಿಂದ ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀರು ಮತ್ತು ವಿದ್ಯುತ್ ಸ್ಥಗಿತಗೊಳಿಸಿ ಶಿಕ್ಷೆ ವಿಧಿಸಿದ್ದಾರೆ.
ಅಲ್ಲದೇ ತುಮಕೂರು ಜಿಲ್ಲೆಯಲ್ಲಿ ಇನ್ನೂ 3 ಲಕ್ಷ ಜನರು ಮೊದಲ ಡೋಸ್ ಲಸಿಕೆ ಪಡೆದಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.
ಹಸುವಿನ ಸಗಣಿ, ಮೂತ್ರದಿಂದ ಆರ್ಥಿಕ ಅಭಿವೃಧ್ಧಿಯೂ ಸಾಧ್ಯ- ಶಿವರಾಜ್ ಸಿಂಗ್ ಚೌಹಾಣ್








