ಬಿಟ್ ಕಾಯಿನ್ ಹಗರಣ ಯಾರೇ ಭಾಗಿಯಾಗಿದರೂ ಬಲಿ ಹಾಕ್ತಿವಿ – ಸಿ ಎಂ
ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮಿಲಾಗಿದ್ದರು ಬಿಡುವುದಿಲ್ಲ. ಸರ್ಕಾರ ಅಂಥವರನ್ನು ಬಲಿ ಹಾಕೇ ಹಾಕುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು.
ನೆಹರು ಜನ್ಮ ದಿನದ ಪ್ರಯುಕ್ತ ಪುತ್ಥಳಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕರ ಬಳಿ ದಾಖಲೆಗಳಿದ್ದರೆ ಇಡಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ನೀಡಲು ಹಿಂದೇಟು ಹಾಕುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು
ನಾವು ಆತನನ್ನು ಹಿಡಿದಿದ್ದು ಡ್ರಗ್ ಕೇಸ್‌ನಲ್ಲಿ. ನೀವು ಎಲ್ಲವನ್ನೂ ಮುಕ್ತವಾಗಿ ಬಿಟ್ಟು ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣರಾಗಿದ್ದೀರಿ. ನಾವು ಆತನನ್ನು ಡ್ರಗ್ ಕೇಸ್‌ನಲ್ಲಿ ಹಿಡಿದು ವಿಚಾರಣೆ ಮಾಡಿ ಎಲ್ಲ ಬಹಿರಂಗಗೊಳಿಸಿದ್ರೆ, ನಮಗೇ ಪ್ರಶ್ನೆ ಮಾಡ್ತೀರಾ? ಎಂದು ಪ್ರಶ್ನಿಸಿದರು.
2016 ರಿಂದ ಪ್ರಕರಣ ಇದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ಅಂದು ಯಾವ ಪಕ್ಷದ ಸರ್ಕಾರ ಆಡಳಿತದಲ್ಲಿತ್ತು? ಕಾಂಗ್ರೆಸ್ ಯಾಕೆ ಅದರ ಮೇಲೆ ಗಮನ ಹರಿಸಲಿಲ್ಲ?. 2018 ರಲ್ಲಿ ಶ್ರೀಕಿ ಬಂಧಿಸಿ ಬಿಟ್ಟದ್ದು ಯಾಕೆ ಆತನ ಹಿನ್ನೆಲೆ ಬಗ್ಗೆ ಯಾಕೆ ಆಗಲೇ ವಿಚಾರಣೆ ಮಾಡಲಿಲ್ಲ?.. ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ತನಿಖೆ ನಡೆಸುವಂತೆ ನೀವು ಏಕೆ ಹೇಳಲಿಲ್ಲ ಎಂದು ಸಿಎಂ ತರಾಟೆಗೆ ತೆಗೆದುಕೊಂಡರು.
ಅಷ್ಟು ಕೋಟಿ ಹಗರಣವಾಗಿದೆ, ಇಷ್ಟು ಕೋಟಿ ಬಿಟ್ ಕಾಯಿನ್ ಇದೆ ಎಂದು ಆರೋಪ ಮಾಡುತ್ತೀದ್ದೀರಿ. ಒಂದು ಟ್ವೀಟ್ ಆಧಾರದ ಮೇಲೆ ತನಿಖೆ ನಡೆಸುವುದು ಸರಿಯೇ ಎಂದು ಪ್ರಶ್ನಿಸಿದರು.
ಒಂದು ಟ್ವಿಟರ್ ಇಟ್ಟುಕೊಂಡು ಕಾಂಗ್ರೆಸ್ನವರು ಆರೋಪ ಮಾಡ್ತಾರೆ ಅಂದ್ರೆ, ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ. ಆ ಟ್ವಿಟರ್ಗೆ ದಾಖಲೆ, ಸಾಕ್ಷಿ ಇಟ್ಟು ಮಾತನಾಡಿ. ಟ್ವಿಟರ್ ಮೇಲೆ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೆ ತಿರುಗೇಟು ನೀಡಿದ್ರು.








