ಕೋವಿಡ್ 19 : ಕಳೆದ 24 ಗಂಟೆಗಳಲ್ಲಿ 10,229 ಕೊರೊನಾ ಪ್ರಕರಣಗಳು ಪತ್ತೆ
ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 10,229 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
125 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,44,47,536 ಕ್ಕೆ ತಲುಪಿದೆ.
ಸೋಂಕಿನಿಂದ ಮೃತರಾದವರ ಸಂಖ್ಯೆ 4,63,655 ಕ್ಕೆ ತಲುಪಿದೆ.
ಭಾರತದಲ್ಲಿ ಚೇತರಿಕೆಯ ಪ್ರಮಾಣವು ಪ್ರಸ್ತುತ 98.26% ರಷ್ಟಿದೆ, ಇದು ಮಾರ್ಚ್ 2020 ರಿಂದ ಅತ್ಯಧಿಕವಾಗಿದೆ.
ಒಟ್ಟು ಗುಣಮುಖರ ಸಂಖ್ಯೆ 3,38,49,785 ಕ್ಕೆ ತಲುಪಿದೆ.
ಇನ್ನು ದೇಶದಲ್ಲಿ ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 1,34,096 ಕ್ಕೆ ಇಳಿಕೆಯಾಗಿದೆ.