ಶಿಕ್ಷಕನಿಂದ ಲೈಂಗಿಕ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ
ಕೊಯಮತ್ತೂರಿನಲ್ಲಿ 12 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲಾ ಶಿಕ್ಷಕನಿಂದ ಪದೇ ಪದೇ ಲೈಂಗಿಕ ಕಿರುಕುಳ ಕಿರುಕುಳಕ್ಕೆ ಮತ್ತು ಮಾನಸಿಕ ತೊಂದರೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನವೆಂಬರ್ 11 ರ ಗುರುವಾರದಂದು ಘಟನೆ ನಡೆದಿದೆ. ಚಿನ್ಮಯ ವಿದ್ಯಾಲಯ ಶಾಲೆಯಲ್ಲಿ ಮಿಥುನ್ ಚಕ್ರವರ್ತಿ ಎಂಬ ಶಾಲಾ ಶಿಕ್ಷಕನಿಂದ ಪದೆ ಪದೆ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ಆಕೆಯ ಸ್ನೇಹಿತ ಮತ್ತು ಪೋಷಕರು ಆರೋಪಿಸಿದ್ದಾರೆ.
ಆರು ತಿಂಗಳಿನಿಂದ ಹಲ್ಲೆ ಮತ್ತು ಕಿರುಕುಳದ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ., ವಿದ್ಯಾರ್ಥಿಯು ಪದೇ ಪದೇ ತನ್ನ ಶಾಲೆಯನ್ನು ಬದಲಾಯಿಸುವಂತೆ ತನ್ನ ಪೋಷಕರನ್ನು ಕೇಳಿಕೊಂಡಿದ್ದಾಳೆ ಆದರೆ ಕಾರಣವನ್ನು ಬಹಿರಂಗಪಡಿಸಿರಲಿಲ್ಲ ದು ಆಕೆಯ ತಾಯಿಯ ಹೇಳಿದ್ದಾರೆ.
“ಅವನು ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಅನೇಕ ಬಾರಿ ಕಿರುಕುಳ ನೀಡಿದ್ದಾನೆ. ಅವನ ಹೆಂಡತಿ ಅದೇ ಶಾಲೆಯಲ್ಲಿ ಪಾಠ ಮಾಡುತ್ತಾಳೆ, ಅವರಿಗೆ ಮತ್ತು ಪ್ರಾಂಶುಪಾಲರಿಗೆ ಇದೆಲ್ಲವೂ ತಿಳಿದಿತ್ತು, ಆದರೆ ಅವರು ಏನೂ ಮಾಡಲಿಲ್ಲ, ”ಎಂದು ಯುವತಿಯ ಆಪ್ತ ಸ್ನೇಹಿತ ಶಿಕ್ಷಕನ ವಿರುದ್ದ ಆರೋಪ ಮಾಡಿದ್ದಾನೆ.
ಶಿಕ್ಷಕನ ವಿರುದ್ಧ ಆರ್ ಎಸ್ ಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಕಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








