ಸೈಯ್ಯದ್ ಮುಷ್ತಾಕ್ ಅಲಿ : ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕಗೆ ಸೌರಾಷ್ಟ್ರ ಸವಾಲ್
ದೇಶಿ ಟೂರ್ನಿಯ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳು ಕಾದಾಟ ನಡೆಸಲಿವೆ. ಸದ್ಯ ರಾಷ್ಟ್ರ ರಾಜಧಾನಿಯ ಜನರಿಗೆ ವಾಯುಮಾಲಿನ್ಯ ಕಾಟ ನೀಡಿದೆ.
ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ. ಕರ್ನಾಟಕ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದು ತಂಡಕ್ಕೆ ಸ್ಟಾರ್ ಆಟಗಾರರು ಬಲ ತುಂಬಿದ್ದಾರೆ.
ಕರ್ನಾಟಕ ತಂಡದ ಸ್ಟಾರ್ ಆಟಗಾರರಾದ ಕರುಣ್ ನಾಯರ್, ಮನೀಷ್ ಪಾಂಡೆ, ದೇವದತ್ ಪಡೀಕ್ಕಲ್ ಅವರು ರನ್ ಕಲೆ ಹಾಕುತ್ತಿದ್ದು ತಂಡದ ಬಲವನ್ನು ಹೆಚ್ಚಿಸಿದ್ದಾರೆ.
ಈ ಆಟಗಾರರು ಎದುರಾಳಿಗಳಿಗೆ ನಡುಕ ಹುಟ್ಟಿಸಬಲ್ಲರು. ಈ ಮೂವರು ಸ್ಟಾರ್ ಆಟಗಾರರು ಆಡಿದ ಐದು ಪಂದ್ಯಗಳಲ್ಲಿ ರನ್ ಮಹಲ್ ಕಟ್ಟಿದ್ದಾರೆ. ಕರುಣ್ 158, ಮನೀಷ್ ಪಾಂಡೆ 172, ದೇವದತ್ 109 ಸೇರಿಸಿ ಭರವಸೆ ಮೂಡಿಸಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅನುಭವ ಹೊಂದಿರುವ ಮಾಯಾಂಕ್ ಅಗರ್ ವಾಲ್ ಅವರು ಪರಿಸ್ಥಿತಿಗೆ ಅನುಗುಣವಾಗಿ ರನ್ ಕಲೆ ಹಾಕಬಲ್ಲರು. ಉಳಿದ ಆಟಗಾರರು ಮತ್ತು ಆಲ್ ರೌಂಡರ್ ಗಳು ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಬೇಕಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಪಿನ್ ಬೌಲರ್ ಕೆ.ಗೌತಮ್ ಏಳು ವಿಕೆಟ್ ಹಾಗೂ ಕೆ.ಸಿ ಕರಿಯಪ್ಪ ಆರು ವಿಕೆಟ್ ಕಬಳಿಸಿದ್ದು ವಿಶ್ವಾಸ ಮೂಡಿಸಿದ್ದಾರೆ.
ವಿಜಯ್ ಕುಮಾರ್ ವೈಶಾಖ್, ಜೆ.ಸುಚಿತ್ ಆಡುವ ಅವಕಾಶ ಲಭಿಸಿದರೆ ಬಿಗುವಿನ ದಾಳಿ ನಡೆಸಬೇಕಿದೆ. ವಿಭಾಗದ ವಿಭಾಗದಲ್ಲಿ ಕಾಣಿಸಿಕೊಳ್ಳಲಿರುವ ಪ್ರಸಿದ್ಧ ಕೃಷ್ಣಾ ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಯನ್ನು ಕಾಡಬೇಕಿದೆ.
ಸೌರಾಷ್ಟ್ರ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಪ್ರೇರಕ್ ಮಂಕದ್ ಹಾಗೂ ಶೆಲ್ಡಾನ್ ಜಾಕ್ಸನ್ ತಂಡದ ಪರ ಗರಿಷ್ಠ ರನ್ ಬಾರಿಸಿದವರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಅರ್ಪಿತ್ ವಾಸವಾದ ಮತ್ತು ಹಿಮಾಲಯ ಬರದ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಬೇಕಿದೆ.
ಸ್ಟಾರ್ ಬೌಲರ್ ಜಯದೇವ್ ಉನಾದ್ಕಟ್, ಧರ್ಮೆಂದರ್ ಸಿಂಗ್ ಜಡೇಜಾ, ಚೇತನ್ ಸಕಾರಿಯಾ ಬಿಗುವಿನ ದಾಳಿ ನಡೆಸಿ ಎದುರಾಳಿಯನ್ನು ಕಂಗೆಡಿಸಬೇಕಿದೆ.
ಅಲ್ಲದೆ ಸ್ಪಿನ್ ಬೌಲರ್ ಗಳು ಶಿಸ್ತು ಬದ್ಧ ಬೌಲಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಿಂಚಬೇಕಿದೆ.