ಜೈಪುರದಲ್ಲಿದ್ದೇನೆ.. ನಾಯಕನಾಗಿ ತಂಡವನ್ನು ಮುನ್ನಡೆಸುತ್ತೇನೆ.. 9 ವರ್ಷದ ಹಿಂದೆ ಮತ್ತು ಇಂದು..!
ಜೈಪುರವನ್ನು ತಲುಪಿದ್ದೇನೆ. ತಂಡವನ್ನು ನಾನೇ ಮುನ್ನಡೆಸುತ್ತಿದ್ದೇನೆ. ಜವಾಬ್ದಾರಿ ವಹಿಸಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ.
ಹಾಗಂತ ರೋಹಿತ್ ಶರ್ಮಾ 9 ವರ್ಷಗಳ ಹಿಂದೆಯೇ ಹೇಳಿದ್ದರು. 2012ರಲ್ಲಿ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮುಂಬೈ ತಂಡದ ನಾಯಕನಾಗಿದ್ದರು. ಆಗ ಅವರು ಟ್ವಿಟರ್ ನಲ್ಲಿ ಈ ರೀತಿ ಬರೆದುಕೊಂಡಿದ್ದರು.
ಆದ್ರೆ ಈಗ 9 ವರ್ಷದ ಹಿಂದಿನ ಟ್ವಿಟರ್ ಈಗ ವೈರಲ್ ಆಗಿಬಿಟ್ಟಿದೆ. ರೋಹಿತ್ ಶರ್ಮಾ ಅಂದು ಮುಂಬೈ ರಣಜಿ ತಂಡದ ನಾಯಕನಾಗಿದ್ದರು. ಇದೀಗ 9 ವರ್ಷಗಳ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾ ಟಿ-20 ವಿಶ್ವಕಪ್ ತಂಡದ ಕಪ್ತಾನನಾಗಿದ್ದಾರೆ.
ಹೆಡ್ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಸಾರಥಿಯಾಗಿ ನ್ಯೂಜಿಲೆಂಡ್ ಸವಾಲು ಎದುರಿಸಲಿದ್ದಾರೆ.
ಮೂರು ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯ ನವೆಂಬರ್ 17ರಂದು ನಡೆಯಲಿದೆ. ಈ ಪಂದ್ಯ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರಿಗೆ ಅಗ್ನಿಪರೀಕ್ಷೆಯಾಗಲಿದೆ. ಅಲ್ಲದೆ ಮೊದಲ ಪರೀಕ್ಷೆಯೂ ಅಗಲಿದೆ.
ಈ ಹಿಂದೆ ರೋಹಿತ್ ಶರ್ಮಾ ಹಂಗಾಮಿ ನಾಯಕನಾಗಿ ಟೀಮ್ ಇಂಡಿಯಾಗೆ ಹಲವು ಸರಣಿಗಳನ್ನು ಗೆದ್ದುಕೊಟ್ಟಿದ್ದಾರೆ. ಅಲ್ಲದೆ ಐಪಿಎಲ್ ನಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದ ನಾಯಕ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಇದೀಗ ರೋಹಿತ್ ಶರ್ಮಾ ಗೆ ರಿಯಲ್ ಚಾಲೆಂಜ್ ಎದುರಾಗಿದೆ. ಅದನ್ನು ಯಾವ ರೀತಿ ನಿಭಾಯಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.