ಯಾರ ಬಳಿ ದುಡ್ಡು ಇದಿಯೋ ಅವರು ಮಾತ್ರ ಕುಡಿಯಬೇಕು ಎಂದು ಮದ್ಯದ ಮೇಲೆ ಸುಂಕ ಹೆಚ್ಚಳ ಕುರಿತು ಅಬಕಾರಿ ಸಚಿವ ಎಚ್ ನಾಗೇಶ್ ಪ್ರತಿಕ್ರಿಯೆಸಿದ್ದಾರೆ. ಕೋಲಾರ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಸಚಿವರು ದೆಹಲಿ ಹಾಗೂ ಆಂಧ್ರ ಮಾದರಿಯಲ್ಲಿ ನಮ್ಮಲೂ ಟ್ಯಾಕ್ಸ್ ಹೆಚ್ಚಳ ಆಗಿದೆ ರಾಜ್ಯಾದ್ಯಂತ ಶೇ.40 ರಷ್ಟು ಮದ್ಯದಂಗಡಿ ತೆರೆದಿದೆ. ಇದುವರೆಗೂ 500 ಕೋಟಿ ವರೆಗೂ ಕಲೆಕ್ಷನ್ ಆಗಿದೆ. ಇಂದಿನಿಂದ 11 ಪರ್ಸೆಂಟ್ ಟ್ಯಾಕ್ಸ್ ಹೆಚ್ಚಿಸಲಾಗಿದೆ ಎಂದ್ರು. ಇನ್ನೂ ಒಟ್ಟು 18 ಸ್ಲ್ಯಾಬ್ ನಲ್ಲಿ 4 ಸ್ಲ್ಯಾಬ್ ನಲ್ಲಿ ಹೆಚ್ಚಿನ ಆದಾಯ ಬರಲಿದೆ. ಒಂದು ಕ್ವಾರ್ಟರ್ ಮೇಲೆ 5 ರೂಪಾಯಿ ಹೆಚ್ಚಳವಾಗಿದೆ. ಒಟ್ಟು 22,500 ಸಾವಿರ ಕೋಟಿ ಟಾರ್ಗೆಟ್ ಇತ್ತು.
ತೆರಿಗೆ ಹೆಚ್ಚಳ ಆಗಿರೋದ್ರಿಂದ 2,500 ಕೋಟಿ ಹೆಚ್ಚಿಗೆ ಬರಲಿದೆ. ಈ ವರ್ಷ ಒಟ್ಟು 25 ಸಾವಿರ ಕೋಟಿ ನಮ್ಮ ಬೊಕ್ಕಸಗೆ ಬರಲಿದೆ. ಇನ್ನುಳಿದ ಶಾಪ್ ಗಳನ್ನು ತೆರೆಯಲು 18 ನೇ ತಾರೀಖಿನ ಬಳಿಕ ತೀರ್ಮಾನ ಮಾಡ್ತೇವೆ
‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ
ಬಾಗಲಕೋಟೆ: ಆರ್‌ಎಸ್‌ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...








