ಬೆಳೆ ಹಾನಿ ಸಮೀಕ್ಷೆ, ಶೀಘ್ರದಲ್ಲೇ ಪರಿಹಾರ – ಸಿ ಎಂ
ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕರ್ನಾಟಕದ ಹಲವೆಡೆ ಅಕಾಲಿಕವಾಗಿ ಮಳೆ ಸುರಿಯುತ್ತಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರೆದ ಹಾಗೇ ಆಗಿದೆ.
ಚಿತ್ರದುರ್ಗ ದಾವಣಗೆರೆ ಸೇರಿದಂತೆ ನೂರಾರು ಎಕೆರೆ ಬೆಳೆ ನೆಲ ಕಚ್ಚಿದೆ. ಕರಾವಳಿಯಲ್ಲಿ ಭತ್ತದ ಕೃಷಿ ಹಾನಿಗೀಡಾಗಿದೆ. ಧಾರವಾಡದಲ್ಲಿ ಹತ್ತಿ ಮೆಕ್ಕೆಜೋಳ ಸೇರಿದಂತೆ ಈರುಳ್ಳಿ ಬೆಳೆ ನಾಶವಾಗಿದೆ.
ಮಳೆಯಿಂದಾಗಿ ತರಕಾರಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯಗಳಿದ್ದು, ಭತ್ತ ಮೊದಲಾದ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸುವ ಬಗ್ಗೆ ಚರ್ಚೆಗಳು ನಡೆದಿದೆ.
ಈ ನಡುವೆ ಮಳೆಯಿಂದಾದ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿದ್ದು, ರೈತರಿಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಭಾಗವಹಿಸಿದ ನಂತರ ಮಧ್ಯಮಗಳ ಜೊತೆ ಮಾತನಾಡಿದ ಮುಖ್ಯ ಮಂತ್ರಿಗಳು ಬತ್ತ ಮತ್ತು ಇತರ ಧಾನ್ಯಗಳ ಎಂ ಎಸ್ ಪಿ ಖರೀದಿಯ ಕುರಿತು ಶೀಘ್ರದಲ್ಲಲ್ಲೇ ಮಹತ್ವದ ಸಭೆ ಸೇರಲಿದ್ದೇವೆ ಎಂದು ತಿಳಿಸಿದರು.








