ಭಾವಿ ಪತಿಯ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ ಮಾಡೆಲ್!!!
ದಕ್ಷಿಣ ಕೋಲ್ಕತ್ತಾದಲ್ಲಿ ವಾಸವಾಗಿರುವ ಇರುವ 25 ವರ್ಷದ ರೂಪದರ್ಶಿಯೊಬ್ಬಳು ಮದುವೆ ನಿಶ್ವಯವಾಗಿರುವ ತನ್ನ ಭಾವಿ ಪತಿಯ ಮೇಲೆ ಆತ್ಯಾಚಾರದ ಆರೋಪ ಮಾಡಿದ್ದಾಳೆ. ಬಾರ್ ಮ್ಯಾನೇಜರ್ ಆಗಿರುವ ತನ್ನ ನಿಶ್ಚಿತ ವರ ತನ್ನ ಮೇಲೆ ಮೂರು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಗರ್ಭೀಣಿಯಾಗಿರುವ ನನ್ನನ ಗರ್ಭಪಾತ ಮಾಡಿಸಿಕೊಳ್ಳುವಂತೆ ಬಲವಂತ ಪಡಿಸುತ್ತಿದ್ದಾನೆ ಎಂದು ದೂರು ನೀಡಿದ್ದಾಳೆ.
ಒಂದೂವರೆ ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಿಯನ್ನು ಭೇಟಿಯಾಗಿದ್ದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಸೋನಾರ್‌ಪುರದ ಘಾಸಿಯಾರಾ ಪ್ರದೇಶದ ನಿವಾಸಿಯೊಂದಿಗೆ ರೂಪದರ್ಶಿ ಸ್ನೇಹ ಬೆಳೆಸಿದ್ದಳು. ಅವರ ಸಂಬಂಧವು ಗಾಡವಾಗುತ್ತಿದ್ದಂತೆ ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಅವರ ಕುಟುಂಬಗಳು ಸಹ ಒಪ್ಪಿಗೆ ತಿಳಿಸಿದ್ದಾರೆ.. ಎರಡು ಕಡೆಯವರು ನವೆಂಬರ್ 29 ರಂದು ಮದುವೆ ದಿನಾಂಕವನ್ನು ನಿಗದಿಪಡಿಸಿಕೊಂಡಿದ್ದಾರೆ.
ಆದಾಗ್ಯೂ, ಆರೋಪಿಯು ಕೆಲವು ತಿಂಗಳ ಹಿಂದೆ ತನ್ನ ಪೋಷಕರೊಂದಿಗೆ ಮದುವೆಯ ಬಗ್ಗೆ ಚರ್ಚಿಸುವ ನೆಪದಲ್ಲಿ ಅವಳನ್ನು ಕರೆದು ಆಗಸ್ಟ್ 3 ರಂದು ಸೋನಾರ್‌ಪುರದ ಫ್ಲಾಟ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸದ್ಯ ಪ್ರಕರಣದ ತನಿಖೆ ಆರಂಬಿಸಿರುವ ಪೊಲೀಸರು ಹೊಟೆಲ್ ನ ಸಿ ಸಿ ಟಿವಿ ದೃಶ್ಯಗಳನ್ನ ವಶ ಪಡಿಸಿಕೊಂಡು ಪರೀಶಿಲಿಸುತ್ತಿದ್ದಾರೆ. ಯುವತಿಯ ಮೆಡಿಕಲ್ ರಿಪೋರ್ಟ್ ಬಂದ ನಂತರ ತನಿಖೆ ಚುರುಕಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.








