ಮಗುವಿಗೆ ಜನ್ಮನೀಡಿದ ಹತ್ತನೆ ತರಗತಿ ವಿದ್ಯಾರ್ಥಿನಿ…..
ಪ್ರೌಡಶಾಲೆಯಲ್ಲಿ ಹತ್ತನೆ ತರಗತಿ ಓದುತ್ತಿರುವ ಯುವತಿಯೊಬ್ಬಳು ಹೆಣ್ಣು ಮಗುವಿಗೆ ಸಹಜ ಹರಿಗೆಯಲ್ಲಿ ಜನ್ಮ ನೀಡಿರುವ ಘಟನೆ ಉಪ್ಪಿನಂಗಂಡಿಯಲ್ಲಿ ನಡೆದಿದೆ. ಈ ಘಟನೆಗೆ ಕಾರಣನಾದ ಆರೋಪಿಯನ್ನ ಪೊಲೀಸರು ವಶಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರೌಡಶಾಲಾ ವಿದ್ಯಾರ್ಥಿನಿ ಹೊಟ್ಟೆಯಲ್ಲಿ ಗಡ್ಡೆ ಬೆಳೆಯುತ್ತಿದೆ ಎಂದು ತಿಳಿದ ಪೋಷಕರು ವಿದ್ಯಾರ್ಥಿಯನ್ನ ಹತ್ತಿರದ ಆಸ್ಪತ್ರೆಗೆ ತಪಾಸಣೆಗೆಂದು ಕರೆದುಕೊಂಡು ಹೋಗಿದ್ದಾರೆ. ವೈದ್ಯರು ತಪಾಸಣೆ ಮಾಡಿದಾಗ ಕೆ ತುಂಬು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.
ಗುರುವಾರ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಹಜ ಹೆರಿಗೆಯಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ. ವೈದ್ಯರು ಆನಂತರ ಘಟನೆಯ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಯನ್ನ ವಿಚಾರಿಸಿದಾಗ ಹಿರೆಬಂಡಾಡಿ ಗ್ರಾಮದ ಮದ್ಮೆತ್ತಿಮಾರು ಮನೆ ನಿವಾಸಿ ಕೇಶವ ಎನ್ನುವ ವ್ಯಕ್ತಿ ಅತ್ಯಾಚಾರವೆಸಗಿರುವುದಾಗಿ ತಿಳಿಸಿದ್ದಾಳೆ. ಈ ಹಿನ್ನಲೆಯಲ್ಲಿ ಆರೋಪಿಯನ್ನ ವಶಕ್ಕೆ ಪಡೆದಿರುವ ಉಪ್ಪಿನಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣವನ್ನ ದಾಖಲಿಸಿದ್ದಾರೆ.








