ಟೆಕ್ ದೈತ್ಯ “ಅಲಿಬಾಬಾ” ಮತ್ತು “ಟೆನ್ಸೆಂಟ್ ಹೋಲ್ಡಿಂಗ್ಸ್” ಕಂಪನಿಗಳಿಗೆ ದಂಡ ವಿಧಿಸಿದ ಚೀನಾ..!
ಚೀನಾ : ಅಲಿಬಾಬಾ ಸೇರಿದಂತೆ ಟೆಕ್ ದೈತ್ಯ ಕಂಪನಿಗಳಿಗೆ ಚೀನಾ ಸರ್ಕಾರವು ದಂಡ ವಿಧಿಸಿದೆ..
ಹೌದು.. ಉದ್ಯಮ ಸ್ವಾಧೀನ ಪ್ರಕ್ರಿಯೆ ವರದಿ ಮಾಡಿಕೊಳ್ಳಲು ವಿಫಲರಾದ ತಂತ್ರಜ್ಞಾನ ಕಂಪನಿಗಳಾದ ಅಲಿಬಾಬಾ ಗ್ರೂಪ್ ಮತ್ತು ಟೆನ್ಸೆಂಟ್ ಹೋಲ್ಡಿಂಗ್ಸ್‌ಗೆ ಚೀನಾ ಸರ್ಕಾರವು ಭಾರಿ ದಂಡ ವಿಧಿಸಿದೆ.
ಏಕಸ್ವಾಮ್ಯ ವಿರುದ್ಧ ಕಠಿಣ ಕಾರ್ಯಾಚರಣೆಯನ್ನು ಮುಂದುವರೆಸಿರುವ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಈ ಕಂಪನಿಗಳು ಎಂಟು ವರ್ಷಗಳ ಹಿಂದೆ 43 ಇತರೆ ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದವು. ಆದರೆ ಕೇಂದ್ರೀಕೃತ ನಿರ್ವಹಣೆ ನಿಯಮದಡಿ ಈ ಸ್ವಾಧೀನ ಪ್ರಕ್ರಿಯೆಯ ವರದಿ ನೀಡಿರಲಿಲ್ಲ.
ಪ್ರತಿ ಉಲ್ಲಂಘನೆಗೆ 5 ಲಕ್ಷ ಯುವಾನ್ ($80,000) ದಂಡ ವಿಧಿಸಲಾಗಿದೆ ಎಂದು ಅದು ಹೇಳಿದೆ. ಚೀನಾದಲ್ಲಿ ಆಡಳಿತದಲ್ಲಿರುವ ಕಮ್ಯುನಿಸ್ಟ್ ಪಕ್ಷವು ಕಳೆದ ವರ್ಷದ ಕೊನೆಯಿಂದ ಏಕಸ್ವಾಮ್ಯ ತಡೆ ದತ್ತಾಂಶ ಸುರಕ್ಷತೆ ಮತ್ತು ಇತರ ನಿಯಮ ಉಲ್ಲಂಘನೆಗಳ ವಿರುದ್ಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದೆ.
ಇನ್ನೂ ಉದ್ಯಮಗಳು ಆರ್ಥಿಕ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುತ್ತಿರುವ ಕಾರಣ ಕಳವಳಗೊಂಡಿರುವ ಸರ್ಕಾರ ಗ್ರಾಹಕರ ಶೋಷಣೆ ಅಥವಾ ಹೊಸ ಸ್ಪರ್ಧಿಗಳ ಪ್ರವೇಶಕ್ಕೆ ತಡೆಯೊಡ್ಡಬಾರದು ಎಂದು ಆದೇಶಿ ನೀಡಿದೆ.
ಜೆಡಿ.ಕಾಮ್ ಮತ್ತು ಸುನಿಂಗ್ ಲಿಮಿಟೆಡ್ ಮತ್ತು ಸರ್ಚ್ ಎಂಜಿನ್ ಆಪರೇಟರ್ ಬೈಡು ವಿರುದ್ಧವೂ ದಂಡ ವಿಧಿಸಲಾಗಿದೆ. ಇವುಗಳ ವಿರುದ್ಧವೂ ನಿಯಮ ಉಲ್ಲಂಘನೆ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ..








