ಬಿಜೆಪಿ ಸರ್ಕಾರಗಳು ಜನ ಸಾಮಾನ್ಯರ ಪಿಕ್ ಪಾಕೇಟ್ ಮಾಡುತ್ತಿವೆ : ಡಿ.ಕೆ.ಶಿವಕುಮಾರ್ DK Shivakumar saaksha tv
ಬೆಂಗಳೂರು : ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಬಿಜೆಪಿ ಸರ್ಕಾರಗಳು ಜನ ಸಾಮಾನ್ಯರ ಪಿಕ್ ಪಾಕೇಟ್ ಮಾಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಬಿಜೆಪಿ ಸರ್ಕಾರಗಳು ಜನ ಸಾಮಾನ್ಯರ ಪಿಕ್ ಪಾಕೇಟ್ ಮಾಡುತ್ತಿವೆ.
ಉಪ ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಪೆಟ್ರೋಲ್ ಬೆಲೆ ರು 10 ಇಳಿಸಲಾಗಿದೆ. ಆದರೆ ಈಗಲೂ ಹೆಚ್ಚಿನ ತೆರಿಗೆ ಕಟ್ಟುತ್ತಿದ್ದೇವೆ.
ಬೆಲೆ ಏರಿಕೆ ನೀತಿ ಕೈಬಿಡುವ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಉಪ ಚುನಾವಣೆಯ ಫಲಿತಾಂಶ, ರೈತರ ಹೋರಾಟಕ್ಕೆ ಮಣಿದು ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ.
ದೇಶದ ರೈತರು ಸತತ ಒಂದು ವರ್ಷ ಕಾಲ ವ್ಯವಸಾಯ, ಮನೆ ಬಿಟ್ಟು, ಪ್ರಾಣದ ಹಂಗು ತೊರೆದು ಬೀದಿಗಿಳಿದು ಸತ್ಯಾಗ್ರಹ ನಡೆಸಿದರು.
ತಮ್ಮ ಬದುಕಿನ ಉಳಿವಿಗಾಗಿ ಹೋರಾಟ ನಡೆಸಿದ ಅನ್ನದಾತರಿಗೆ ಸಾಷ್ಟಾಂಗ ನಮನ ಸಲ್ಲಿಸುತ್ತೇನೆ ಎಂದರು.
ಇನ್ನು ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ಸೂಚನೆಯಂತೆ, ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ಅಭಿಯಾನ ಹಮ್ಮಿಕೊಂಡಿದ್ದೇವೆ.
ಈ ದೇಶದ ಜನರ ಶಕ್ತಿ, ರೈತರ ಶಕ್ತಿ, ಅನ್ನದಾತರ ಹೋರಾಟ ಬಹುಮತವಿರುವ ಬಿಜೆಪಿ ಸರ್ಕಾರ ತನ್ನ ನಿಲುವಿನಿಂದ ಯೂಟರ್ನ್ ತೆಗೆದುಕೊಳ್ಳುವಂತೆ ಮಾಡಿದೆ ಎಂದು ಕುಟುಕಿದರು.