ದ್ರಾವಿಡ್ ರಣತಂತ್ರ.. ಸೂರ್ಯಕುಮಾರ್ ಗೆ ಬಂಫರ್.. ಸೌತ್ ಆಫ್ರಿಕಾಗೆ ಶರ್ದೂಲ್
ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗ್ತಾರಾ? ಮುಂಬೈ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಟೆಸ್ಟ್ ಪದಾರ್ಪಣೆಗೆ ವೇದಿಕೆ ರೆಡಿಯಾಗಿದ್ಯಾ..? ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆಯೇ? ಎಂದ್ರೆ ರಾಷ್ಟ್ರೀಯ ಮಾಧ್ಯಮಗಳು ಹೌದು… ಎನ್ನುತ್ತಿವೆ.
ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ಕಿವೀಸ್ ವಿರುದ್ಧದ ಟಿ 20 ಸರಣಿಯನ್ನು ಕ್ಲೀನ್ ಸ್ವೀಪ್ ಗೊಳಿಸಿದೆ. ಇದೇ ಜೋಶ್ ನಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಗೂ ಸಜ್ಜಾಗುತ್ತಿದೆ. ಆದ್ರೆ ಯಾವ ಮ್ಯಾಚ್ (ಅಧಿಕೃತ, ಅನಧಿಕೃತ ಸರಣಿ) ಆಡುತ್ತಿದ್ದಾರೆ ಅನ್ನೋ ಅಂಶದೊಂದಿಗೆ ಸಂಬಂಧವಿಲ್ಲದೇ ಪ್ರತಿಯೊಬ್ಬ ಆಟಗಾರನನ್ನು ಎಲ್ಲಾ ಮಾದರಿ ಕ್ರಿಕೆಟ್ ಗೆ ಸನ್ನದ್ಧವಾಗಿರುವಂತೆ ವಿವಿಧ ಮ್ಯಾಚ್ ಗಳನ್ನು ಆಡಿಸಲು ದ್ರಾವಿಡ್ ಪ್ರಣಾಳಿಕೆ ರೆಡಿ ಮಾಡಿದ್ದಾರೆ.
ಇದರ ಭಾಗವಾಗಿ ಶಾರ್ದೂಲ್ ಅವರನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸುವ ನಿರೀಕ್ಷೆಯಿದೆ. ಡಿಸೆಂಬರ್ 6ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್‍ಗೆ ರೆಡಿಯಾಗಿರುವಂತೆ ಶಾರ್ದೂಲ್‍ಗೆ ಬಿಸಿಸಿಐ ಕರೆ ನೀಡಿದೆಯಂತೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ಶಾರ್ದೂಲ್ ಅವರನ್ನು ಮುಂದಿನ ಸರಣಿಗಳಿಗೆ ಸನ್ನದ್ಧಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನು ಸೂರ್ಯಕುಮಾರ್ ಬಗ್ಗೆ ಹೇಳುವುದಾದರೆ… ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮೊದಲು ಘೋಷಿಸಲಾದ ಭಾರತ ತಂಡದಲ್ಲಿ ಅವರ ಹೆಸರು ಇರಲಿಲ್ಲ. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ.. ಮೊದಲ ಟೆಸ್ಟ್‍ನಲ್ಲಿ ಅವರನ್ನು ಆಡಿಸುವ ಸಾಧ್ಯತೆ ಇದೆಯಂತೆ. ವಿಶ್ವಸನೀಯ ಮೂಲಗಳ ಪ್ರಕಾರ ಕಾನ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಯಾದವ್ ಪಾದಾರ್ಪಣೆ ಮಾಡುವ ಸಾಧ್ಯತೆಗಳಿವೆ.