ಕೆಲವು ದಿನಗಳ ಹಿಂದೆಯಷ್ಟೇ ದಿಲ್ಲಿಯಲ್ಲಿ ‘ಬಾಯಿಸ್ ಲಾಕರ್ ರೂಮ್’ ಎಂಬ ಇನ್ ಸ್ಟಾಗ್ರಾಂ ಗ್ರೂಪ್ ನಲ್ಲಿ ಶಾಲಾ ಬಾಲಕರು ಅಪ್ರಾಪ್ತ ಬಾಲಕಿಯರ ಆಶ್ಲೀಲ ಫೋಟೋಗಳನ್ನು ಹಂಚಿ, ಅತ್ಯಾಚಾರದ ಬಗ್ಗೆ ಚಾಟ್ ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಇಂತಹದ್ದೇ ಒಂದು ಘಟನೆ ಕೋಲ್ಕತಾದಲ್ಲಿ ಬೆಳಕಿಗೆ ಬಂದಿದೆ.
ಗೂಗಲ್ ಡ್ರೈವ್ ನಲ್ಲಿ ಕೋಲ್ಕತಾದ ಕೆಲ ಯುವಕರು ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸಿ ಸ್ನೇಹಿತರೊಂದಿಗೆ ಹಂಚುತ್ತಿದ್ದಾರೆ ಎಂದು Aiyoobrows ಎಂಬ ಹೆಸರಿರುವ ಟ್ವಿಟ್ಟರ್ ಖಾತೆದಾರರೊಬ್ಬರು ದೂರಿದ್ದಾರೆ . ‘ ಬಾಯಿಸ್ ಲಾಕರ್ ರೂಮ್ ‘ ನಂತೆಯೇ ಪುರುಷರು ಈ ಕುಕೃತ್ಯ ನಡೆಸುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
https://twitter.com/Bratmatcat/status/1257200288043282432

ಗೂಗಲ್ ಡ್ರೈವ್‌ನ ವಿಕೃತಿಯನ್ನು ಕೋಲ್ಕತ್ತಾದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಜಾದವ್‌ಪುರ್ ವಿಶ್ವವಿದ್ಯಾಲಯದ (ಜೆಯು) ವಿದ್ಯಾರ್ಥಿ ಪ್ರಾರಂಭಿಸಿದ್ದಾನೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ . ಆತ ಅದೇ ವಿವಿಯ ತನ್ನ ಸ್ನೇಹಿತರೊಂದಿಗೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾನೆ . ಆತನ ಹೆಸರನ್ನು ಎಸ್ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ . ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಹಲವು ಯುವತಿಯರು ಈ ಜಾಲಕ್ಕೆ ಬಲಿಯಾಗಿರುವ ಬಗ್ಗೆ ಬರೆದುಕೊಂಡಿದ್ದಾರೆ .








