ಸರ್ಕಾರದಿಂದ ಮದ್ಯಪಾನ ಹಾಗೂ ಮಾಂಸ ಮಾರಾಟ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಭಾರತ ರಕ್ಷಾ ಮಂಚ್ ಶ್ರೀರಾಮಸೇನಾ ಸೇರಿದಂತೆ ಐದಕ್ಕೂ ಹೆಚ್ಚು ಸಂಘಟನೆಗಳು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರಿಗೆ ಮನವಿ ಸಲ್ಲಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಧಾರ್ಮಿಕ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದರು. ಬಡವರು, ಕಾರ್ಮಿಕರು, ರೈತರು, ಸಾಮಾನ್ಯ ವರ್ಗ, ವಿದ್ಯಾರ್ಥಿಗಳು ಹಾಗೂ ಇತರರು ಕುಡಿತಕ್ಕೆ ಬಲಿಯಾಗಿ ಆರೋಗ್ಯ ಹಾಗೂ ಆರ್ಥಿಕ ದುರ್ಬಲರಾಗಿ ನಾಶವಾಗುತ್ತಿದ್ದಾರೆ. ಸರ್ಕಾರದ ಈ ನಿರ್ಣಯ ಸರಿಯಾದುದ್ದಲ್ಲಾ ಎಂದು ಅಸಮಾಧಾನ ಹೊರಹಾಕಿದರು. ಕೊರೋನಾ ದುಷ್ಪರಿಣಾಮದಿಂದ ಆರ್ಥಿಕ ಮುಗ್ಗಟ್ಟು ಒದಗಿರುವುದು ಸಹಜವಾಗಿದೆ. ಮದ್ಯದಿಂದ ಆರ್ಥಿಕ ಸಬಲೀಕರಣ ಚಿಂತನೆ ಮಹಾ ಮೂರ್ಖತನವಾಗಿದೆ ಕೂಡಲೇ ಮದ್ಯ ಮರಾಟ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.
ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ
ಮೂಡಿಗೆರೆ: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದ ವಿಚಾರವಾಗಿ ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರು ಮುಖ್ಯಮಂತ್ರಿ ಡಿ.ಕೆ....








