ನೃತ್ಯ ನಿರ್ದೇಶಕ ಶಿವಶಂಕರ್ ಮಾಸ್ಟರ್ ಆರೋಗ್ಯ ಚಿಂತಾಜನಕ
ಪ್ರಮುಖ ನೃತ್ಯ ನಿರ್ದೇಶಕ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿವಶಂಕರ್ ಮಾಸ್ಟರ್ ಅವರ ಆರೋಗ್ಯ ಚಿಂತಾಜನಕವಾಗಿದೆ.
ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆ ಪಾಲಾಗಿರುವ ಅವರ ಆರೋಗ್ಯದ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.
ಅವರ ಶ್ವಾಸಕೋಶ ಶೇಕಡಾ 75 ರಷ್ಟು ಸೋಂಕಿಗೆ ಒಳಗಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಆಗುತ್ತಿದ್ದು, ಸಾಕಷ್ಟು ಹಣವಿಲ್ಲದ ಕಾರಣ ದಾನಿಗಳ ಸಹಾಯಕ್ಕಾಗಿ ಕಾಯುತ್ತಿದ್ದಾರೆ ಶಿವಶಂಕರ್ ಕುಟುಂಬಸ್ಥರು.
ಶಿವಶಂಕರ್ ಮಾಸ್ಟರ್ ತೆಲುಗು ಮತ್ತು ತಮಿಳಿನಲ್ಲಿ ಹಲವು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ನಾಲ್ಕು ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಮಗಧೀರ ಚಿತ್ರದಲ್ಲಿ ಧೀರ.. ಧೀರ.. ಧೀರ.. ಹಾಡಿಗೆ 2011ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು.
ಡ್ಯಾನ್ಸ್ ಮಾಸ್ಟರ್ ಆಗಿದ್ದಲ್ಲದೆ ಸುಮಾರು 30 ಚಿತ್ರಗಳಲ್ಲಿ ನಟನಾಗಿಯೂ ನಟಿಸಿದ್ದಾರೆ.
ದೂರದರ್ಶನದಲ್ಲಿ ಪ್ರಸಾರವಾಗುವ ನೃತ್ಯ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.