ವೆಸ್ಟ್ಇಂಡೀಸ್ ಹೋರಾಟಕ್ಕೆ ಸಿಗಲಿಲ್ಲ ಸಮಾಧಾನ, ಲಂಕಾ ಸ್ಪಿನ್ ಬಲೆಗೆ ಬಿದ್ದು ಹೀನಾಯವಾಗಿ ಸೋತ ಕೆರಿಬಿಯನ್ ಕಿಂಗ್ಸ್..!
ಗಾಲ್ ಟೆಸ್ಟ್ ಪಂದ್ಯದ 4ನೇ ದಿನವೇ ವೆಸ್ಟ್ಇಂಡೀಸ್ ಸೋಲಿನ ಸುಳಿಗೆ ಸಿಲುಕಿತ್ತು.
ಶ್ರೀಲಂಕಾದ ಸ್ಪಿನ್ ದಾಳಿ ಎದುರು ಉತ್ತರವಿಲ್ಲದೆ ಪರದಾಡಿತು.
ಆದರೆ 5ನೇ ದಿನ ವೆಸ್ಟ್ಇಂಡೀಸ್ ನಡೆಸಿದ ಹೋರಾಟ ಕೊಂಚ ಹೊತ್ತು ಶ್ರೀಲಂಕಾ ತಂಡಕ್ಕೂ ತಲೆನೋವು ತಂದಿತ್ತು.
ಆದರೆ ಶ್ರೀಲಂಕಾದ ಸ್ಪಿನ್ ಟ್ರ್ಯಾಪ್ಗೆ ಬಿದ್ದ ವೆಸ್ಟ್ಇಂಡೀಸ್ ಮೊದಲ ಟೆಸ್ಟ್ ಪಂದ್ಯವನ್ನು 180 ರನ್ಗಳಿಂದ ಹೀನಾಯವಾಗಿ ಸೋತಿದೆ.
18ರನ್ಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದ ವೆಸ್ಟ್ಇಂಡೀಸ್ಗೆ ಬೊನರ್ ಮತ್ತು ಜೊಶುವಾ ಡ ಸಿಲ್ವಾ 7 ನೇ ವಿಕೆಟ್ಗೆ 100 ರನ್ಗಳ ಜೊತೆಯಾಟ ತಂದಿದ್ದರು.
ಈ ಹಂತದಲ್ಲಿ ಶ್ರೀಲಂಕಾ ಕೊಂಚ ಗಲಿಬಿಲಿ ಗೊಂಡಿತ್ತು. ಆದರೆ ಎಂಬಲ್ಡೆನಿಯಾ 54 ರನ್ಗಳಿಸಿದ್ದ ಜೊಶುವಾ ವಿಕೆಟ್ ಕಬಳಿಸಿದರು. ಲಂಕಾ ಗೆಲುವಿನ ವಾಸನೆ ಆಸ್ವಾದಿಸ ತೊಡಗಿತು.
ಬೊನರ್ ಕೂಡ ಅರ್ಧಶತಕದ ಗಡಿ ದಾಟಿದರು. ಮತ್ತೊಂದು ಕಡೆ ರಾಕಿಮ್ ಕಾರ್ನ್ ವಾಲ್ ರಕ್ಷಣಾತ್ಮಕ ಆಟಕ್ಕೆ ಮೊರೆಹೋದ್ರು.
ಪ್ರವೀಣ್ ಜಯ ವಿಕ್ರಮ ಕಾರ್ನ್ ವಾಲ್ ವಿಕೆಟ್ ಕಬಳಿಸಿದರು. ಎಂಬುಲ್ಡೆನಿಯಾ ಜೊಮೆಲ್ ವಾರಿಕನ್ ಮತ್ತು ಶನನ್ ಗೇಬ್ರಿಯಲ್ ವಿಕೆಟ್ ಪಡೆದು ಮಿಂಚಿದರು.
ಬೊನರ್ 68 ರನ್ಗಳಿಸಿ ಅಜೇಯರಾಗಿ ಉಳಿದರು. ವೆಸ್ಟ್ಇಂಡೀಸ್ 160 ರನ್ಗಳಿಗೆ ಆಲೌಟ್ ಆಗಿ 187 ರನ್ಗಳ ಹೀನಾಯ ಸೋಲು ಅನುಭವಿಸಿತು. ಎಡಗೈ ಸ್ಪಿನ್ನರ್ ಎಂಬುಲ್ಡೆನಿಯಾ 5 ವಿಕೆಟ್ ಪಡೆದರೆ, ಲೆಗ್ ಸ್ಪಿನ್ನರ್ ರಮೇಶ್ ಮೆಂಡಿಸ್ 4 ವಿಕೆಟ್ ಪಡೆದರು.