ಕಲ್ಲಿದ್ದಲು ಗಣಿಯಲ್ಲಿ ಬೆಂಕಿ | 52 ಗಣಿಗಾರರು ಸಾವು siberian-coal-mine
ಮಾಸ್ಕೋ : ಕಲ್ಲಿದ್ದಲು ಗಣಿಯಲ್ಲಿ ಬೆಂಕಿ ಅವಘಡ ಸಂಭವಿಸಿ 52 ಗಣಿಗಾರರು ಮತ್ತು ರಕ್ಷಕರು ಮೃತಪಟ್ಟಿರುವ ಘಟನೆ ಮಾಸ್ಕೋದಾ ಸೈಬೀರಿಯನ್ ನಲ್ಲಿ ನಡೆದಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ.
ಗುರುವಾರ ಈ ಘಟನೆ ನಡೆದಿದ್ದು, ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ 52 ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಅಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಪ್ರೌರುತ್ತರಾಗಿದ್ದಾರೆ. ಸದ್ಯ 14 ಶವಗಳ ಪತ್ತೆಯಾಗಿದ್ದು, ವಿಷಕಾರಿ ಹೊಗೆಯ ಕಾರಣದಿಂದಾಗಿ ಕಾಣೆಯಾದ 38 ಮಂದಿ ಹುಡುಕಾಟ ನಿಲ್ಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ siberian-coal-mine ಕಲ್ಲಿದ್ದಲು ಗಣಿಯಲ್ಲಿ ಒಟ್ಟು 285 ಜನರು ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಘಟನೆಯಲ್ಲಿ 49 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.