ಎಫ್ ಐಎಚ್ | ಕ್ವಾರ್ಟರ್ ಫೈನಲ್ಸ್ ಮೇಲೆ ಭಾರತದ ಕಣ್ಣು
ಭುವನೇಶ್ವರ್ : ಕೆನಡಾ ವಿರುದ್ಧ ಭರ್ಜರಿ ಜಯ ಸಾಧಿಸಿದರುವ ಭಾರತ ಜೂನಿಯರ್ ಪುರುಷರ ಹಾಕಿ ತಂಡ ಶನಿವಾರ ನಡೆಯಲಿರುವ “ಬಿ” ಗುಂಪಿನ ಪಂದ್ಯದಲ್ಲಿ ಪೋಲಾಂಡ್ ವಿರುದ್ಧ ಹೋರಾಟ ನಡೆಸಲಿದ್ದು, ಕ್ವಾರ್ಟರ್ ಫೈನಲ್ಸ್ ಮೇಲೆ ಕಣ್ಣು ನೆಟ್ಟಿದೆ.
ಬುಧವಾರ ಭಾರತ ಆಡಿದ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ನಿರಾಸೆ ಗೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆಯಿತು.
ಪೋಲೆಂಡ್ ಸಹ ಆಡಿದ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಜಯ ಸಾಧಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ನಿರಾಸೆ ಅನುಭವಿಸಿತ್ತು.
ಭಾರತ ಮೂರು ಅಂಕಗಳೊಂದಿಗೆ ಎರಡನೇ ಸ್ಥಾನದಲಿದೆ.
ಟೀಮ್ ಇಂಡಿಯಾದ ಯುವ ಆಟಗಾರರಾದ ಉತ್ತಮ ಹಾಗೂ ಸಂಜಯ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಸಂಜಯ್ ಆಡಿದ ಎರಡು ಪಂದ್ಯಗಳಲ್ಲಿ ಆರು ಗೋಲುಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.
ಉತ್ತಮ್ ಸಹ ನಾಲ್ಕು ಗೋಲು ಸಿಡಿಸಿದ್ದಾರೆ. ಉಳಿದಂತೆ ಅರ್ಜಿತ್ ಮೂರು ಗೋಲು ಸಿಡಿಸಿದ್ದು, ಇವರ ಮೇಲೆ ಭರವಸೆ ಮೂಡಿದೆ.