ಕೇರಳದಲ್ಲಿ ನೋರಾ ವೈರಸ್ ಪತ್ತೆ : ರಾಜ್ಯದಲ್ಲಿ ಹೈ ಅಲರ್ಟ್
ಕೊಡಗು : ಇನ್ನೇನು ಕೊರೊನಾ ಆತಂಕ ಕಡಿಮೆಯಾಯ್ತು, ದೈನಂದಿನ ಕೇಸ್ ಗಳ ಸಂಖ್ಯೆ ಕಡಿಮೆಯಾಯ್ತು ಅನ್ನೋವಾಗ್ಲೇ ಕೇರಳದಲ್ಲಿ ನೋರೋ ವೈರಸ್ ಪತ್ತೆಯಾಗಿದೆ.. ಹೀಗಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ..
ಕೇರಳದ ಗಡಿ ಭಾಗ ಕೊಡಗಿನಲ್ಲಿ ಕಟ್ಟೆಚ್ವರವಹಿಸಲಾಗಿದೆ.. ಕೇರಳ ರಾಜ್ಯದ ವಯನಾಡಿನಲ್ಲಿ 13 ಜನರಲ್ಲಿ ನೋರೋ ವೈರಸ್ ಕಾಣಿಸಿಕೊಂಡ ಹಿನ್ನೆಲೆ ಗಡಿ ಭಾಗ ಕರಿಕೆ , ಕುಟ್ಟ, ಭಾಗದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಕರೋನ ಟೆಸ್ಟ್ ವರದಿ ಇಲ್ಲದೆ ಯಾರನ್ನೂ ಗಡಿಯೊಳಗೆ ಬಿಡದೇ ಇರುವಂತೆ ಕ್ರಮ ತೆಗೆದುಕೊಳ್ಳಲಾಗಿದೆ..
ಇನ್ನೂ ನೋರೋ ಖಾಯಿಲೆ ತಪಾಸಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಆರೋಗ್ಯ ಸಿಬ್ಬಂದಿ ಪ್ರತಿಯೊಬ್ಬರಿಗೂ ಟೆಸ್ಟ್ ಮಾಡುತ್ತಿದ್ದಾರೆ. ಜಿಲ್ಲೆಯ ಆರೋಗ್ಯ ಸಿಬ್ಬಂದಿ ಅಲರ್ಟ್ ಆಗಿದ್ದು, ವಾಂತಿ, ಭೇದಿ ,ಜ್ವರ ಕಾಣಿಸಿಕೊಂಡವರಿಗೆ ತಪಾಸಣೆ ನಡೆಸ್ತಾಯಿದ್ದಾರೆ. ಇನ್ನೂವರೆಗೂ ಕೊಡಗಿನಲ್ಲಿ ಯಾವುದೇ ನೋರೊ ರೋಗದ ಲಕ್ಷಣ ಕಾಣಿಸಿಕೊಂಡಿಲ್ಲ.








