ಕೊರೊನಾ ವಿರುದ್ಧ ಮೋದಿ ಜೊತೆ ಇಡೀ ದೇಶವೇ ಹೋರಾಡಿದೆ : ಜೆ.ಪಿ.ನಡ್ಡಾ Modi saaksha tv
ನವದೆಹಲಿ : ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಸರ್ಕಾರಗಳು ಕೊರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡಿದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಡೀ ದೇಶವೇ ಹೋರಾಟ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಇದು ಅವರ 83ನೇ ಮನ್ ಕಿ ಬಾತ್.
ಇದುವರೆಗೆ ಅವರು ಈ ಕಾರ್ಯಕ್ರಮದಲ್ಲಿ ರಾಜಕೀಯ ಪ್ರಸ್ತಾಪಿಸಿಲ್ಲ ಮತ್ತು ರಾಜಕೀಯ ಲಾಭಕ್ಕೆ ಇದನ್ನು ಬಳಸಿಕೊಂಡೂ ಇಲ್ಲ.
ದೇಶದ ನಾನಾ ಭಾಗಗಳಲ್ಲಿರುವ ಸಂಸ್ಕøತಿ, ಆಚರಣೆಗಳನ್ನು ವಿಶ್ವಕ್ಕೆ ತಿಳಿಸುವ ಕೆಲಸ ಮಾಡಿದರು ಎಂದರು.
ಕೊರೋನಾ ಸಂದರ್ಭದಲ್ಲಿ ದೇಶದ ಜನರನ್ನು ಒಗ್ಗೂಡಿಸಲು ಪ್ರಧಾನಿಯವರು ಸಾಮೂಹಿಕವಾಗಿ ಚಪ್ಪಾಳೆ ತಟ್ಟುವ, ದೀಪ ಹಚ್ಚುವ ಕರೆ ನೀಡಿದ್ದರು.
ಇದಕ್ಕೆ ಜನ ಸ್ಪಂದಿಸಿ, ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದರು ಎಂದು ಹೇಳಿದರು.









