ಅತ್ಯಾಚಾರ ಪ್ರಕರಣದಲ್ಲಿ ಒಂದೇ ದಿನದಲ್ಲೇ ತೀರ್ಪು – ಬಿಹಾರ ಕೋರ್ಟ್ ದಾಖಲೆ
ದೇಶದಲ್ಲೆ ಮೊದಲ ಭಾರಿಗೆ ಒಂದೇ ದಿನದಲ್ಲಿ ವಾದ ವಿವಾದಗಳನ್ನ ಆಲಿಸಿ ಆರೋಪಿ ಶಿಕ್ಷೇ ನೀಡಿರುವ ವಿಶೇಷ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರ ರಾಜ್ಯದ ಪೋಕ್ಸೋ ಕಾಯ್ದೆಯ ವಿಶೇಷ ನ್ಯಾಯಾಧೀಶ ಶಶಿಕಾಂತ್ ರೈ ಅತ್ಯಂತ ವೇಗವಾಗಿ ತೀರ್ಪು ನೀಡಿ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೇ ವರ್ಷ ಜುಲೈ 22 ರಂದು ಎಂಟು ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 23 ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಇದರ ವಿಚಾರಣೆಯನ್ನ ಅಕ್ಟೋಬರ್ 4, 2021 ರಂದು ನಡೆಸಿತ್ತಾದರೂ ಆರ್ಡರ್ ಶೀಟ್ ಇಂದು ಶುಕ್ರವಾರ ಲಭ್ಯವಾದ ನಂತರ ಈ ವಿಷಯವು ಬೆಳಕಿಗೆ ಬಂದಿದೆ.
ವಿಶೇಷ ನ್ಯಾಯಾಧೀಶ (ಪೋಕ್ಸೊ) ಶಶಿಕಾಂತ ರೈ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿದೆ. ಸಂತ್ರಸ್ತರಿಗೆ ಸಂತ್ರಸ್ತರ ಪರಿಹಾರ ನಿಧಿಯಿಂದ 7 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಬಿಹಾರ ಸರ್ಕಾರದ ಗೃಹ ಇಲಾಖೆ ಪ್ರಾಸಿಕ್ಯೂಷನ್ ನಿರ್ದೇಶನಾಲಯವು ಪತ್ರಿಕಾ ಟಿಪ್ಪಣಿಯಲ್ಲಿ ಹೀಗೆ ಹೇಳಿದೆ: “ಪ್ರಾಯಶಃ ಒಂದೇ ದಿನದ ವಿಚಾರಣೆಯಲ್ಲಿ ಶಿಕ್ಷೆಯನ್ನು ನೀಡಿದ ಮೊದಲ ಪ್ರಕರಣ ಇದಾಗಿದೆ. ಅದಕ್ಕೂ ಮೊದಲು, ದತಿಯಾ (MP) ಜಿಲ್ಲೆಯಲ್ಲಿ, ನ್ಯಾಯಾಲಯವು 8 ಆಗಸ್ಟ್, 2018 ರಂದು ಮೂರು ದಿನಗಳ ವಿಚಾರಣೆಯ ನಂತರ ತೀರ್ಪು ನೀಡಿತು. ಬಿಹಾರ ಇದೀಗ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ನೀಡುವ ಮೂಲಕ ಒಂದೇ ದಿನದಲ್ಲಿ ವಿಚಾರಣೆ ನಡೆಸುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದೆ.
ನ್ಯಾಯಾಧಿಶ ಶಶಿಕಾಂತ ರೈ ಅವರು ತಮ್ಮ 20 ಪುಟಗಳ ಆದೇಶದಲ್ಲಿ ಹೀಗೆ ಹೇಳಿದರು: ರೇಪ್ ಸಂತ್ರಸ್ತೆಯ ಪ್ರಕರಣಗಳಲ್ಲಿ ಸಂಪೂರ್ಣ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ,ಘಟನೆಯ ಸ್ಥಳವನ್ನು ಚೆನ್ನಾಗಿ ಸಾಬೀತುಪಡಿಸಿದ್ದಾರೆ ಮತ್ತು ತನಿಖೆಯಲ್ಲಿ ಯಾವುದೇ ದೋಷವನ್ನು ಆರೋಪಿ ತೋರಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಎಂದು ಉಲ್ಲೇಖಿಸಿ ಆರೋಪಿಗೆ ಶಿಕ್ಷೆ ನೀಡಿದ್ದಾರೆ.








