ಕಳೆದ 24 ಗಂಟೆಗಳಲ್ಲಿ 8,309 ಹೊಸ ಪ್ರಕರಣಗಳು ಪತ್ತೆ..!
ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 8,309 covid19 ಪ್ರಕರಣಗಳು ಪತ್ತೆಯಾಗಿವೆ.
236 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,45,80,832 ಕ್ಕೆ ತಲುಪಿದೆ.
ಸೋಂಕಿನಿಂದ ಮೃತರಾದವರ ಸಂಖ್ಯೆ 4,68,790 ಕ್ಕೆ ತಲುಪಿದೆ.
ರಾಷ್ಟ್ರೀಯ ಚೇತರಿಕೆ ದರವು ಪ್ರಸ್ತುತ 98.34 ಪ್ರತಿಶತದಷ್ಟಿದೆ. ಇದು ಮಾರ್ಚ್ 2020 ರಿಂದ ಅತಿ ಹೆಚ್ಚು.
ಕಳೆದ 24 ಗಂಟೆಗಳಲ್ಲಿ ಕೋವಿಡ್ ನಿಂದ 9,905 ಗುಣಮುಖರಾಗಿದ್ದಾರೆ.
ಈವರೆಗೆ 34008183 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,03,859 ಕ್ಕೆ ಇಳಿಕೆಯಾಗಿದೆ.
ದೇಶದಲ್ಲಿ ಈವರೆಗೆ ಒಟ್ಟು 1,22,41,68,929 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.
24 ಗಂಟೆಯಲ್ಲಿ, 7,62,268 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ.
24 ಗಂಟೆಯಲ್ಲಿ, 42,04,171 ಜನರಿಗೆ ಲಸಿಕೆ ನೀಡಲಾಗಿದೆ.








