ಶಾಲೆ ಬಂದ್ ಮಾಡಲ್ಲ – ಶಿಕ್ಷಣ ಸಚಿವರ ಸ್ಪಷ್ಟನೆ
ಸದ್ಯಕ್ಕೆ ಶಾಲೆಗಳನ್ನ ಬಂದ್ ಮಾಡುವ ಯಾವುದೇ ಉದ್ದೇಶ ಇಲ್ಲ ಎಂದು ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ತುಮಕೂರಿನಲ್ಲಿ ಮಾತನಾಡಿ ತಿಳಿಸಿದರು ̤ ದಕ್ಷಿಣ ಆಫ್ರಿಕಾದಲ್ಲಿ ಕರೋನಾ ಓಮಿಕ್ರಾನ್ ರೂಪಾಂತರಿ ಕಂಡು ಬಂದ ಹಿನ್ನಲೆಯಲ್ಲಿ ಎಲ್ಲ ದೇಶಗಳಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ.
ಅಲ್ಲದೆ ಬೆಂಗಳೂರು ಸೇರಿದಂತೆ ಹಲವು ಶಾಲಾ ಕಾಲೇಜುಗಳಲ್ಲಿ ಕರೋನಾ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಮತ್ತೆ ಶಾಲೆಗಳನ್ನ ಬಂದ್ ಮಾಡುವ ಬಗ್ಗೆ ಊಹಾಪೋಹಗಳು ಎದ್ದಿದ್ದವು . ಸಿ ಎಂ ತುರ್ತು ಸಭೆ ನಡೆಸಿ ಗಂಟೆಗೊಮ್ಮೆ ಡಿ ಡಿಪಿಐಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ಶಾಲೆಗೆ ಬರುವ ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್ ಕಡ್ಡಾಯಗೊಳಸಲಾಗಿದೆ.
ಶಾಲೆಗಳಲ್ಲಿ ಪ್ರತಿದಿನ ಸ್ಯಾನಿಟೈಸ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸದರು.
ಟ್ವೀಟರ್ ಸಿಇಒ ಹುದ್ದೆ ವಹಿಸಿಕೊಂಡ ಭಾರತೀಯ ಮೂಲದ “ಪರಾಗ್”








