80 ರ ವೃದ್ಧನಿಂದ 65 ವೃದ್ಧೆಯ ಮೇಲೆ ಅತ್ಯಾಚಾರ – ವೃದ್ಧ ಎಸ್ಕೇಪ್
80 ವರ್ಷದ ವೃದ್ಧನಿಂದ 65 ವರ್ಷದ ವೃದ್ಧಯೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದ ಗಧಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಅತ್ಯಾಚಾರಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ವೃದ್ಧನಿಗಾಗಿ ಹುಡುಕಾಟ ನಡೆಸಿದ್ದಾರೆ. ಮಾಹಿತಿಯ ಪ್ರಕರ 65 ವರ್ಷದ ವೃದ್ಧೆ ಗರ್ಹಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಈ ಸಮಯದಲ್ಲಿ ಜ್ವಾಲಾ ಸಿಂಗ್ ಎನ್ನುವ ವಯಸ್ಸಾದ ವ್ಯಕ್ತಿಯ ಪರಿಚಯವಾಗಿತ್ತು. ವೃದ್ದಾಪ್ಯದಲ್ಲಿ ಆಸರೆಯಾಗಲು ಆಕೆಯ ಮೇಲೆ ಸಹಾನುಭೂತಿ ತೋರಿಸಿ ವೃದ್ಧ ಪರಿಚಯಿಸಿಕೊಂಡಿದ್ದ. ಆನಂತರ ದಿನಾ ಮನೆಗೆ ಭೇಟಿ ಕೊಡುತ್ತಿದ್ದ ಈ ಸಮಯದಲ್ಲಿ ಬಲವಂತವಾಗಿ ಅಜ್ಜಿಯ ಜೊತೆ ದೈಹಿಕ ಸಂಬಂಧ ಬೆಳಸಿದ್ದಾನೆ.
ಪೊಲೀಸರು ಮೊದಲು ಈ ಸುದ್ಧಿ ಕೇಳಿ ಆಶ್ಚರ್ಯಗೊಂಡ ಪೊಲೀಸರು ನಂತರ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ವೃದ್ಧ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.