ಬಂಪರ್ ಅನೌನ್ಸ್ ಮೆಂಟ್ : ಇದೇ ಕೊನೆಯ ಐಪಿಎಲ್ ಮೆಗಾ ಹರಾಜು IPL mega auction Saaksha tv
ಇಂಡಿಯನ್ ಪ್ರೀಮಿಯರ್ ಲೀಗ್ .. ಬಿಸಿಸಿಐ, ಆಟಗಾರರಿಗೆ, ಫ್ರಾಂಚೈಸಿಗಳಿಗೆ, ಕಾಸಿನ ಮಳೆ ಸುರಿಸುವ ರಿಚ್ ಲೀಗ್. ಈ ಕಲರ್ ಫುಲ್ ಲೀಗ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೂ ತುಸು ಆಸಕ್ತಿ ಹೆಚ್ಚು ಕೂಡ.
ಈಗಾಗಲೇ 14 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ ಐಪಿಎಲ್ ಮುಂದಿನ ವರ್ಷ ಎರಡು ತಂಡಗಳ ಆಗಮನದಿಂದ ಇನ್ನಷ್ಟು ರಸವತ್ತಾಗಿರಲಿದೆ. ಈ ಕ್ರಮದಲ್ಲಿ ಮೆಗಾ ಹರಾಜು -2022 ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಯಾವ ತಂಡ ಯಾವ ಆಟಗಾರನಿಗೆ ಮಣೆ ಹಾಕಲಿದೆ. ಯಾವ ಆಟಗಾರನನ್ನು ಕೈ ಬಿಡಲಿದೆ..? ಹರಾಜಿನಲ್ಲಿ ಯಾವ ಆಟಗಾರ ಎಷ್ಟು ಮೊತ್ತಕ್ಕೆ ಹೋಗುತ್ತಾನೆ ಅನ್ನೋ ಎಲ್ಲರಲ್ಲೂ ಮೂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಚರ್ಚೆ ಆರಂಭವಾಗಿದೆ.
ಈ ಮಧ್ಯೆ ಶ್ರೀನಿವಾಸ್ ರಾವ್ ಎಂಬ ನೆಟಿಜನ್ ಸೋಶಿಯಲ್ ಮೀಡಿಯಾದಲ್ಲಿ ಬಂಫರ್ ಅನೌನ್ಸ್ ಮೆಂಟ್ ಎಂದು ಬಾಂಬ್ ಸ್ಫೋಟಿಸಿದ್ದಾರೆ. ಐಪಿಎಲ್-2022 ಕೊನೆಯ ಮೆಗಾ ಹರಾಜು ಆಗಿದ್ದು, ಇನ್ನು ಮುಂದೆ ಐಪಿಎಲ್‍ನಲ್ಲಿ ಯಾವುದೇ ಬಿಡ್‍ಗಳು ಇರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ನೆಟಿಜನ್‍ಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. “ನಿಜವಾಗಿಯೂ, ಇದು ಕೊನೆಯ ಮೆಗಾ ಹರಾಜು ಪ್ರಕ್ರಿಯೆ ಆಗಿದ್ದರೇ ಫ್ರಾಂಚೈಸಿಗಳು ಆಟಗಾರರನ್ನು ಬಹಳ ಜಾಗರೂಕರಾಗಿ ಖರೀದಿ ಮಾಡಬೇಕು. ಬಿಗ್ ಬ್ಯಾಷ್ ನಂತಹ ಡ್ರಾಫ್ಟ್ ವ್ಯವಸ್ಥೆ ಇದ್ದರೆ ಐಪಿಎಲ್ ಗೆ ಉತ್ತಮ ಎನ್ನುತ್ತಿದ್ದಾರೆ.









