ಒಟ್ಟಾವ : ಕೊರೊನಾ ಲಾಕ್ ಡೌನ್ ನಿಂದಾಗಿ ಹಲವು ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ಮೇಲೆ ಪೆಟ್ಟು ಬಿದ್ದಿದ್ದು, ಅದನ್ನ ಸರಿದೂಗಿಸುವ ನಿಟ್ಟಿನಲ್ಲಿ ಹಲವು ದೇಶಗಳು ಪ್ರಯತ್ನಿಸುತ್ತಿವೆ. ಇದರ ನಡುವೆ ಇದೀಗ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನರ ಹಿತಕ್ಕಾಗಿ ದುಡಿಯುತ್ತಿರುವ ಫ್ರಂಟ್ ಲೈನ್ ವರ್ಕರ್ ಗಳಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್ ಸಿಹಿ ಸುದ್ದಿ ನೀಡಿದ್ದಾರೆ. ಆ ಮೂಲಕ ಜಸ್ಟಿನ್ ಟ್ರುಡೋವ್ ಎಲ್ಲರ ಮನ ಗೆದ್ದಿದ್ದಾರೆ.
ಫ್ರಂಟ್ ಲೈನ್ ವರ್ಕರ್ ಗ
ಳ ವೇತನ ಹೆಚ್ಚಳ
”ಕಡಿಮೆ ಸಂಬಳವನ್ನು ತೆಗೆದುಕೊಂಡು, ತಮ್ಮ ಪ್ರಾಣ ಮತ್ತು ಆರೋಗ್ಯವನ್ನೇ ಪಣಕ್ಕಿಟ್ಟು ಪ್ರತಿ ನಿತ್ಯ ಕೆಲಸ ಮಾಡುತ್ತಿರುವ ಫ್ರಂಟ್ ಲೈನ್ ವರ್ಕರ್ ಹೆಚ್ಚಿನ ಸಂಬಳಕ್ಕೆ ಅರ್ಹರು” ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್ ಹೇಳಿದ್ದಾರೆ. ಹೀಗಾಗಿ, ಕೆನಡಾ ಮತ್ತು ಅದರ ಎಲ್ಲಾ ಪ್ರಾಂತ್ಯಗಳಲ್ಲಿನ ಕೆಲಸಗಾರರಿಗೆ ವೇತನವನ್ನು ಹೆಚ್ಚಳ ಮಾಡಲಾಗುತ್ತಿದೆ.
ಅದಕ್ಕಾಗಿ ಜಸ್ಟಿನ್ 2 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಹಿರಿಯರ ಮನೆಗಳಲ್ಲಿ ಕೆಲಸ ಮಾಡುವವರು, ಕೋವಿಡ್-19 ನಿಂದ ಹೆಚ್ಚು ಸಾವು ಸಂಭವಿಸಿರುವ ಸ್ಥಳಗಳಲ್ಲಿ ಕೆಲಸ ಮಾಡುವವರು, ಪ್ರತಿ ದಿನ ಅಗತ್ಯ ಸೇವೆಯನ್ನು ಪೂರೈಸುತ್ತಿರುವ ಎಲ್ಲರಿಗೂ ಸಂಬಳ ಹೆಚ್ಚಿಸಲಾಗುತ್ತದೆ. ವೇತನ ಹೆಚ್ಚಳಕ್ಕಾಗಿ ಕೆನಡಾ ಸರ್ಕಾರ 2 ಬಿಲಿಯನ್ ಡಾಲರ್ ನೀಡಲಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೋವ್ ಘೋಷಿಸಿದ್ದಾರೆ. ಜಸ್ಟಿನ್ ಟ್ರುಡೋವ್ ಅವರ ಈ ನಡೆ ಪ್ರಶಂಸೆಗೆ ಭಾಜನವಾಗಿದೆ.
ಇನ್ನು ಕೆನಡಾದಲ್ಲಿ ಇಲ್ಲಿಯವರೆಗೂ 66,434 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 4,569 ಮಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ. 30,406 ಮಂದಿ ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 502 ಜನರ ಆರೋಗ್ಯ ಸ್ಥಿತಿ ಕೆನಡಾದಲ್ಲಿ ಗಂಭೀರವಾಗಿದೆ.








