ಕೊರೊನಾ ಸಾಂಕ್ರಮಿಕ ರೋಗ ತಡೆಗಟ್ಟುವ ನಿಯಮ 2020 ಅನ್ವಯ ಜಿಲ್ಲಾಧಿಕಾರಿಗಳ ಆದೇಶ ಮೇರಿಗೆ ಉಗಾರ ಖುರ್ದ ಪುರಸಭೆ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿದವರಿಂದ 31,600 ರೂ. ದಂಡ ವಸುಲಾತಿ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಕಮಲವ್ವಾ ಭಾಗೋಜಿ ತಿಳಿಸಿದರು.
ಉಗಾರ ಖುರ್ದದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆಯಿರುವರ ಮೇಲೆ ಕ್ರಮ ಜರುಗಿಸಿ ದಂಡ ವಸುಲಾತಿ ಮಾಡಿದ್ದಾರೆ. ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ನಿಯಮ 144 ಜಾರಿಗೆಯಿರುತ್ತದೆ. ಈ ಮಧ್ಯದಲ್ಲಿ 5 ಜನ ಒಂದುಗೂಡಿ ಇರಬಾರದು. ಅಂಗಡಿಧಾರಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾರಾಟ ಮಾಡುತ್ತಿದ್ದವರ ಮೇಲೆ ಅಂಗಡಿ ಮುಂಭಾಗದಲ್ಲಿ ಖರಿದಿಗಾರರಿಂದ ತಲಾ 200 ರೂ. ದಂಡ ವಸುಲಾತಿ ಮಾಡಲಾಗಿದೆ. ಬೈಕ್ ಮೇಲಿಂದ ಇಬ್ಬರು ಜನ ಪ್ರಯಾಣಿಸುವುದು, ರಸ್ತೆ ಬದಿ ಉಗುಳುವುದು, ಮಾಸ್ಕ್ ಧರಿಸದೆ ಸಂಚಾರಿಸುವುದು ಇಂಥವರಿಂದ ದಂಡ ವಸುಲಿ ಮಾಡಲಾಗಿದೆ. ಈ ಕ್ರಮ ನಿರಂತರವಾಗಿ ನಡೆಯಲಿದೆ.
ನೆರೆಯ ಕುಡಚಿ ಪಟ್ಟಣದಲ್ಲಿ ಕೊರೊನಾ ಸೋಂಕಿತ ಪತ್ತೆಯಾಗಿದ್ದು. ಕುಡಚಿ ಪಟ್ಟಣ ಸಂಪೂರ್ಣವಾಗಿ ಲಾಕ್‍ಡೌನ್ ಮಾಡಿದ್ದಾರೆ. ಅಲ್ಲಿಯ ಕೆಲವರು ನದಿಯಿಂದ ಈಜುತ್ತಾ ಮತ್ತು ರೈಲ್ವೆ ಹಾಗೂ ಸಂಚಾರ ಸೇತುವೆಯಿಂದ ಉಗಾರಯತ್ತ ಸಂಚಾರಿಸುತ್ತಿರುವರನ್ನು ತಡೆಗಟ್ಟಿ ಬಂದೋಬಸ್ತ ನೀಡಲಾಗಿದೆ. ಪುರಸಭೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಅಂಥವರನ್ನು ತಡೆದು ಕ್ರಮ ಜರುಗಿಸುತ್ತಿದ್ದೇವೆ ಎಂದು ಕಮಲವ್ವಾ ಭಾಗೋಜಿ ತಿಳಿಸಿದರು.








