RRR ಚಿತ್ರದಲ್ಲಿ ಅರುಣ್ ಸಾಗರ್…! ಯಾವ ಪಾತ್ರದಲ್ಲಿ ನಟನೆ..?
ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳ ಪೈಕಿ RRR ಸಹ ಒಂದು ಈ ಸಿನಿಮಾದಲ್ಲಿ ಬಹುತೇಕ ದೊಡ್ಡ ದೊಡ್ಡ ಸ್ಟಾರ್ ನಟರ ದಂಡೇ ಇದೆ.. ಜ್ಯೂನಿಯರ್ NTR , ರಾಮ್ ಚರಣ್ , ರಾಜಮೌಳಿ ಕಾಂಬೋ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ..
ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ , ಅಜಯ್ ದೇವಗನ್ ಸೇರಿದಂತೆ ಇನ್ನೂ ದೊಡ್ಡ ದೊಡ್ಡ ನಟರೇ ಇದ್ದಾರೆ.. ಸಿನಿಮಾ ಜನವರಿ 7ಕ್ಕೆ ಭಾರತ ಅಷ್ಟೇ ಅಲ್ದೇ ವಿಶ್ವಾದ್ಯಂತ ರಿಲೀಸ್ ಆಗಲಿದೆ.. ಸಿನಿಮಾದ ಪ್ರಚಾರ ಕಾರ್ಯವೂ ಶುರುವಾಗಿದೆ.. ಜೊತೆಗೆ ಒಂದೊಂದೇ ಹಾಡುಗಳನ್ನ ರಿಲೀಸ್ ಮಾಡ್ತಾ ಸಿನಿಮಾದ ಮೇಲಿನ ಕ್ರೇಜ್ ಹೆಚ್ಚಿಸ್ತಿದೆ..
ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ , ಕಲಾ ನಿರ್ದೇಶಕ ಅರುಣ್ ಸಾಗರ್ ಅಭಿನಯಿಸಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.. ಹೌದು ನಟ ಅರುಣ್ ಸಾಗರ್ ಭಿನ್ನ ವಿಭಿನ್ನ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ತಾರೆ.. ಈ ಸಿನಿಮಾದಲ್ಲು ಅವರೊಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎನ್ನಲಾಗಿದೆ. ಆದ್ರೆ ಅದೊಂದು ಕೆಲ ನಿಮಿಷಗಳ ಪಾತ್ರವಾಗಿದ್ದು ಹೆಚ್ಚು ಹೊತ್ತು ಇರುವುದಿಲ್ಲವೆಂದು ಅರುಣ್ ಸಾಗರ್ ಸಂದರ್ಶವೊಂದ್ರಲ್ಲಿ ಹೇಳಿಕೊಂಡಿದ್ದಾರೆ..