ಅಲ್ಲು ಅರ್ಜುನ್ ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ರಶ್ಮಿಕಾ … ಏನದು..?
ಹೂದ್ರಾಬಾದ್ : ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಟಾಲಿವುಡ್ ಗೆ ಹಾರಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ತಿರುವ ರಶ್ಮಿಕಾ ಮಂದಣ್ಣ ಕೈಲಿ ಇನ್ನೂ ಸಾಲು ಸಾಲು ಸಿನಿಮಾಗಳಿವೆ… ಪ್ರಸ್ತುತ ರಶ್ಮಿಕಾ ಬಾಲಿವುಡ್ ನಲ್ಲು ಬ್ಯುಸಿಯಿದ್ಧಾರೆ.. ಇದೆಲ್ಲದ್ರ ನಡುವೆ ರಶ್ಮಿಕಾ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಪುಷ್ಪ ರಿಲೀಸ್ ಗಾಗಿ ಕಾಯುತ್ತಿದ್ದಾರೆ.. ಅಲ್ಲದೇ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲೂ ಸಹ ಅಷ್ಟೇ ಆಕ್ಟೀವ್ ಆಗಿರುತ್ತಾರೆ..
ಈ ನಡುವೆ ರಶ್ಮಿಕಾ ಅಲ್ಲು ಅರ್ಜುನ್ ಗೆ ವಿಶೇಷವಾಗಿ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ.. ಇದನ್ನ ಅಲ್ಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಅಲ್ಲು ಅರ್ಜುನ್ ಗೆ ಕೆಲವು ತಿಂಡಿ ತಿನಿಸುಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ನಟಿ ರಶ್ಮಿಕಾ ಮಂದಣ್ಣ ಗಿಫ್ಟ್ ಬಾಕ್ಸ್ ನಲ್ಲಿಟ್ಟು, ಒಂದು ಪುಟ್ಟ ನೋಟ್ ಬರೆದು ಕಳಿಸಿಕೊಟ್ಟಿದ್ದಾರೆ. ರಶ್ಮಿಕಾ ಕಳಿಸಿರುವ ಉಡುಗೊರೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್, ‘ಈ ಅಚಾನಕ್ ಉಡುಗೊರೆಗೆ ಬಹಳ ಧನ್ಯವಾದಗಳು ಪ್ರೀತಿಯ ರಶ್ಮಿಕಾ’ ಎಂದು ಬರೆದುಕೊಂಡಿದ್ದಾರೆ.
ಅಲ್ಲುಗೆ ಕೊಟ್ಟಿರುವ ರಶ್ಮಿಕಾ ಪುಟ್ಟ ನೋಟ್ ನಲ್ಲಿ ‘ನಿಮಗೆ ಈ ಥರಹದ್ದು ಏನಾದರೂ ಕಳಿಸಬೇಕು ಎನಿಸಿತು ಸರ್, ಪುಷ್ಪ ಸಿನಿಮಾಕ್ಕೆ ಆಲ್ ದಿ ಬೆಸ್ಟ್, ಪ್ರೀತಿಯೊಂದಿಗೆ ರಶ್ಮಿಕಾ ಎಂಬ ನೋಟ್ ಅನ್ನು ಕಳುಹಿಸಿದ್ದಾರೆ.. ಅಲ್ಲದೇ ಒಂದಿಷ್ಟು ಪ್ರೀತಿಯನ್ನು ನಿಮ್ಮ ಕಡೆ ಕಳಿಸುತ್ತಿದ್ದೇನೆ ಎಂಬ ಮತ್ತೊಂದು ಕ್ಯೂಟ್ ನೋಟ್ ಅನ್ನು ಬರೆದು ರಶ್ಮಿಕಾ, ಅಲ್ಲು ಅರ್ಜುನ್‌ಗೆ ಕಳಿಸಿದ್ದಾರೆ. ಡಿಸೆಂಬರ್ 17ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.. ಇಂದು ಟ್ರೇಲರ್ ನ ಸಣ್ಣ ಝಳಕ್ ಅನ್ನ ಟೀಸರ್ ರೂಪದಲ್ಲಿ ಶೇರ್ ಮಾಡಿದೆ ಚಿತ್ರತಂಡ..








