ಮುಂದೂಡಿ ಕೆಯಾಗಬಹುದು RRR ರಿಲೀಸ್ ದಿನಾಂಕ..? ಇಲ್ಲಿದೆ ಕಾರಣ..?
ರಾಜಮೌಳಿ ಅವರ ನಿರ್ದೇಶನದ ರಾಮ್ ಚರಣ್ , ಜ್ಯು. NTr ನಟನೆಯ ಬಹುನಿರೀಕ್ಷೆಯ RRR ಸಿನಿಮಾ ರಿಲೀಸ್ ಗೆ ಇನ್ನೇನು ಒಂದು ತಿಂಗಳು ಬಾಕಿಯಿದೆ.. ಜನವರಿ 7 ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ತಂಡ ಒಂದೊಂದೇ ಹಾಡನ್ನ ರಿಲೀಸ್ ಮಾಡ್ತಾ ಆಫ್ ಲೈನ್ ಪ್ರಚಾರವನ್ನ ಕೂಡ ಶುರು ಮಾಡಿದೆ..
ಕೊನೆಗೂ ಸಿನಿಮಾ ರಿಲೀಸ್ ಆಗೆ ಬಿಡುತ್ತೆ ಅಂತ ದಿನಗಣನೆ ಮಾಡ್ತಿರುವ ಅಭಿಮಾನಿಗಳಿಗೆ ಮತ್ತೆ ನಿರಾಸೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ.. ಯಾಕಂದ್ರೆ ಮತ್ತೆ RRR ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೆಯಾಗುವಸಾಧ್ಯತೆಗಳಿವೆ..
ಓಮ್ರಿಕಾನ್ ಆತಂಕದಿಂದ ಮತ್ತೆ ಸಿನಿಮಾ ರಿಲೀಸ್ ಮಾಡೊದಕ್ಕೆ ಚಿತ್ರತಂಡ ಹಿಂದೆ ಮುಂದೆ ಆಲೋಚಿಸುತ್ತಿದೆ..
‘ಆರ್ಯ’ನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ‘ಶ್ರೀವಲ್ಲಿ’..!
ಅದ್ರಲ್ಲೂ ಇಂದು ಬೆಳಿಗ್ಗೆ ರಾಜಮೌಳಿ ಹಾಗೂ ಇನ್ನೂ ಕೆಲ ನಿರ್ದೇಶಕ ನಿರ್ಮಾಪಕರ ದಂಡು ತೆಲಂಗಾಣ ಸಚಿವರನ್ನೂ ಭೇಟಿ ಮಾಡಿ 50 % ಸೀಟಿಂಗ್ ಆಗ್ಲಿ ಥಿಯೇಟರ್ ಬಮದು ಮಾಡುವುದಾಗಲಿ ಕ್ರಮ ತೆಗೆದುಕೊಳ್ಳದಂತೆ ಮನವಿ ಮಾಡಿದ್ದರು..
ಚಿತ್ರಮಂದಿರಗಳ ಟಿಕೆಟ್ ದರ ಏರಿಕೆ ವಿಷಯದ ಗೊಂದಲ ಸಹ ಇನ್ನೂ ನಿವಾರಣೆ ಆಗಿಲ್ಲ. ಹೀಗಾಗಿಯೇ ಸಿನಿಮಾ ಮುಂದೂಡಿಕೆಯಾಗುವ ಎಲ್ಲಾ ಲಕ್ಷಣ ಕಾಣ್ತಿದೆ. ತೆಲಂಗಾಣದಲ್ಲಿ ಟಿಕೆಟ್ ದರ ಏರಿಕೆಗೆ ಅವಕಾಶ ಸಿಕ್ಕಿದೆಯಾದರೂ ಆಂಧ್ರ ಪ್ರದೇಶದಲ್ಲಿ ಅವಕಾಶ ಸಿಕ್ಕಿಲ್ಲ. ಅಲ್ಲಿ ಸರ್ಕಾರದ ಜೊತೆಗೆ ಚಿತ್ರರಂಗ ಮಾತುಕತೆ ನಡೆಸುತ್ತಿದೆ.








