ಚಂದನವನದ ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ಇಡೀ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.. ಚಂದನವನದ ತಾರೆಯರು , ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.. ಅನೇಕರು ಶಿವರಾಂ ಅವರ ಬಗ್ಗೆ ಮಾತನಾಡಿ ಕೆಲ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.. ಇದೀಗ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ಶಿವರಾಂ ಅವರೊಂದಿಗಿನ ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅನಿಲ್ ಕುಂಬ್ಳೆ ಶಿವರಾಂ ಅವರಿಗೆ ಆಪ್ತರಾಗಿದ್ರು.. ಹಾಗಾಗಿ ಅನಿಲ್ ಕುಂಬ್ಳೆಯವರು ಪತ್ನಿಯೊಂದಿಗೆ ಆಗಮಿಸಿ ಶಿವರಾಂ ಅವರ ಅಂತಿಮ ದರ್ಶನ ಪಡೆದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿ, ಶಿವರಾಮಣ್ಣ ನಮ್ಮ ಕುಟುಂಬಕ್ಕೆ ಬಹಳ ಬೇಕಾದ ವ್ಯಕ್ತಿ. ಸದಾ ಮನೆಗೆ ಬಂದಾಗ ತಮಾಷೆಯಾಗಿ ಮಾತನಾಡುತ್ತಾ, ತಾವೂ ನಗುತ್ತಾ, ನಮ್ಮನ್ನು ನಗಿಸುತ್ತಿದ್ದರು. ಶಿವರಾಂ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಜ್ಞಾನದ ಗಣಿಯಂತಿದ್ದರು. ಅವರ ಅಗಲಿಕೆ ಚಿತ್ರರಂಗಕ್ಕೆ ಬಹಳ ದೊಡ್ಡ ನಷ್ಟ ಎಂದರು.
ಜ್ವಾಲಾಮುಖಿ ಸ್ಫೋಟಕ್ಕೆ 13 ಮಂದಿ ಸಾವು
ಇನ್ನೂ ಮನೆಯಲ್ಲಿ ಯಾವುದೇ ಕಾರ್ಯಕ್ರಮವಾಗಲಿ, ಪೂಜೆಯಾಗಲಿ ಶಿವರಾಮಣ್ಣ ಅಲ್ಲಿರಬೇಕಿತ್ತು. ಕ್ರಿಕೆಟ್ ಬಗ್ಗೆಯೂ ಆಸಕ್ತಿವುಳ್ಳವರಾಗಿದ್ದ ಶಿವರಾಮಣ್ಣ, ಮ್ಯಾಚ್‌ಗಳನ್ನು ನೋಡಲು ಸಹ ಬರುತ್ತಿದ್ದರು. ನಮ್ಮನ್ನು ಹುರಿದುಂಬಿಸುತ್ತಿದ್ದರು. ಎಲ್ಲೇ ಸಿಗಲಿ ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನನ್ನನ್ನು ಸದಾ ಮನೆಗೆ ಆಹ್ವಾನಿಸುತ್ತಲೇ ಇದ್ದರು. ಅವರು ಸ್ವತಃ ಸ್ಟ್ಯಾಂಪ್ ಕಲೆಕ್ಷನ್ ಮಾಡುತ್ತಿದ್ದರು. ಪುಸ್ತಕಗಳನ್ನು ಸಂಗ್ರಹಿಸಿ ಓದುತ್ತಿದ್ದರು. ನಮ್ಮ ಮನೆಗೆ ಬನ್ನಿ ನನ್ನ ಗ್ರಂಥಾಲಯ ನೋಡಿ, ನಾನು ತೆಗೆದ ಚಿತ್ರಗಳನ್ನು ನೋಡಿ, ಸ್ಟ್ಯಾಂಪ್ ಕಲೆಕ್ಷನ್ ನೋಡಿ ಎನ್ನುತ್ತಿದ್ದರು. ಅವರ ನಿಧನ ನನಗೆ ತೀವ್ರ ಬೇಸರ ತಂದಿದೆ ಎಂದಿದ್ಧಾರೆ.
ಜ್ವಾಲಾಮುಖಿ ಸ್ಫೋಟಕ್ಕೆ 13 ಮಂದಿ ಸಾವು
ಅಲ್ಲದೇ ಫೋಟೊಗ್ರಫಿ ಮಾಡಲು ಅರಣ್ಯಕ್ಕೆ ಹೋಗೋಣ ಎಂದು ಸಹ ನನಗೆ ಹೇಳಿದ್ದರು. ಆದರೆ ಅವರ ಈ ಆಸೆ ಈಡೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.. ಅಷ್ಟೇ ಅಲ್ಲ ಶಿವರಾಂ ಅಗಲಿಕೆ ಬಗ್ಗೆ ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ, ಶಿವರಾಮಣ್ಣನ ಅಗಲಿಕೆಯಿಂದ ಅತೀವ ದುಃಖವಾಗಿದೆ. ಅವರು ವಿಶ್ವಕೋಶವಾಗಿದ್ದರು, ಶ್ರೀಮಂತ ಪರಂಪರೆಯನ್ನು ಅವರು ಬಿಟ್ಟು ಹೋಗಿದ್ದಾರೆ. ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಹೃತ್ಪೂರ್ವಕ ಸಂತಾಪಗಳು ಎಂದಿದ್ದಾರೆ.
ಡಿಸೆಂಬರ್ 4 ನೇ ತಾರೀಕು ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ನಂತರ ಈ 7 ರಾಶಿಯವರಿಗೆ ಸರ್ವಇಷ್ಟಾರ್ಥಗಳು ಸಿಧ್ಧಿ.







