ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್..!
ನವದೆಹಲಿ : ರೈತರಿಗೆ ಕೇಂದ್ರೆ ಸರ್ಕಾರ ಮತ್ತೊಂದು ಗೊಒದ ನ್ಯೂಸ್ ಕೊಟ್ಟಿದೆ.. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Yojana) ಅಡಿಯಲ್ಲಿ ಕಳೆದ 2019 ರಿಂದ ಬಾಕಿ ಉಳಿದ 374.78 ಕೋಟಿ ರೂ. ಮೊತ್ತವನ್ನ ಮರು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವಾಲಯ ತಿಳಿಸಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಅರ್ಹ ರೈತರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ. ನೆರವು ಸಿಗಲಿದೆ. ಆದರೆ ಬ್ಯಾಂಕ್ ಖಾತೆ ನಿಷ್ಕ್ರೀಯವಾಗಿರುವುದು ಇತ್ಯಾದಿ ಕಾರಣಗಳಿಂದ ಹಲವಾರು ಮಂದಿ ರೈತರಿಗೆ ಮೊತ್ತ ವಿತರಣೆಯಾಗದೆ ಬಾಕಿಯಾಗಿದೆ.
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 11.60 ಕೋಟಿ ರೈತರಿಗೆ ನಾನಾ ಕಂತುಗಳಲ್ಲಿ 1.60 ಲಕ್ಷ ಕೋಟಿ ರೂ. ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.








