ಮಸಲ್ ಟೈಗರ್ ಆದ ಕೊಮರಂ ಭೀಮ್ #rrr saaksha tv
ಆರ್ಆರ್ಆರ್ ಚಿತ್ರತಂಡ ಸಿನಿಮಾದ ಕುರಿತು ಈಗಾಗಲೇ ಸಾಕಷ್ಟು ಪೋಸ್ಟರ್ ಗನ್ನು ರಿಲೀಸ್ ಮಾಡಿದೆ.
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಗಳು ಹೌರಾ ಎನ್ನುವಂತಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಆಕಾಶದ ಎತ್ತರಕ್ಕೆ ಕೊಂಡೊಯ್ದಿವೆ.
ಈ ಬಿಗ್ ಬಜೆಟ್ ಸಿನಿಮಾವನ್ನು ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, ವಿವಿ ದಾನಯ್ಯ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ಕೊಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೇ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಲ್ಲೂರಿ ಸೀತಾ ರಾಮರಾಜು ಪಾತ್ರದಲ್ಲಿ ಮಿಂಚಲಿದ್ದಾರೆ.
ಈ ಎರಡೂ ಪಾತ್ರಗಳಿಗೆ ಸಂಬಂಧಿಸಿದ ಪೋಸ್ಟರ್, ಟೀಸರ್ ಗಳನ್ನು ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿ ಸಿನಿಮಾ ಪ್ರಿಯರಲ್ಲಿ ಕುತೂಹಲವನ್ನು ಹೆಚ್ಚಿದೆ.
ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಆರ್ ಆರ್ ಆರ್ ಚಿತ್ರತಂಡ ಇಂದು ಕೊಮರಂ ಭೀಮ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ.
ಪೋಸ್ಟರ್ ನಲ್ಲಿ ಜ್ಯೂನಿಯರ್ ಎನ್ ಟಿಆರ್ ಮಸಲ್ ಟೈಗರ್ ರೀತಿ ಕಾಣಿಸುತ್ತಿದ್ದಾರೆ. ಎನ್ಟಿಆರ್ ನೋಟವು ತೀಕ್ಷ್ಣವಾಗಿದ್ದು, ಕೈ ಕಾಲುಗಳು ರಕ್ತಸಿಕ್ತವಾಗಿವೆ.
ಕಾಡಿನಲ್ಲಿ ನಡೆಯುವ ಫೈಟ್ ದೃಶ್ಯಗಳ ಭಾಗವಾಗಿ ಎನ್ ಟಿಆರ್ ಈ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಪೋಸ್ಟರ್ ನಿಂದ ತಿಳಿದುಬರುತ್ತಿದೆ.
ಇನ್ನು ಚಿತ್ರದಲ್ಲಿ ನಾಯಕಿಯರಾಗಿ ಆಲಿಯಾ ಭಟ್, ಒಲಿವಿಯಾ ಮೋರಿಸ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಜಯ್ ದೇವಗನ್, ಶ್ರಿಯಾ ಬಣ್ಣ ಹಚ್ಚಿದ್ದಾರೆ.
ಆರ್ ಆರ್ ಆರ್ ಚಿತ್ರದ ಟ್ರೈಲರ್ ಇದೇ ತಿಂಗಳ 9 ರಂದು ಬಿಡುಗಡೆಯಾಗಲಿದೆ. ಜನವರಿ 7 ರಂದು ಸಿನಿಮಾ ಬಿಡುಗಡೆಯಾಗಲಿದೆ.









