ಮಾತು ಬಾರದ , ಕಿವಿ ಕೇಳದ ಮಹಿಳೆ ಮೇಲೆ ನಿರಂತರ ಅತ್ಯಾಚಾರ : ಕಾಮುಕನ ಬಂಧನ
ನವದೆಹಲಿ : ಮಾತು ಬಾರದ ಹಾಗೂ ಕಿವಿ ಕೇಳದ 30 ವರ್ಷದ ಮಹಿಳೆ ಮೇಲೆ ಕಾಮುಕಕನೋರ್ವ ನಿರಂತರ ಅತ್ಯಾಚಾರ ವೆಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.. ಸಂತ್ರಸ್ತೆಯ ತಾಯಿ ಹಾಗೂ ಸಹೋದರಿಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ರೆಹಮಾನ್ ಎಂಬಾತನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.. ಭಜನಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.. ನವೆಂಬರ್ 22 ರಿಂದ ರೆಹಾನ್ ಎಂಬ ವ್ಯಕ್ತಿ ಆಕೆಯ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ..
ವೈದ್ಯಕೀಯ ಪರೀಕ್ಷೆಯ ಹೆಸರಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
ಮಹಿಳೆಗೆ ಮಾತು ಮತ್ತು ಶ್ರವಣದೋಷವಿದ್ದ ಹುಡುಗಿಯ ಹೇಳಿಕೆಯನ್ನು ದಾಖಲಿಸಲು ಖಾಸಗಿ ಇಂಟರ್ ಪ್ರಿಟರ್ ವ್ಯವಸ್ಥೆಗೊಳಿಸಲಾಗಿತ್ತು. ನಂತರ ಡಿಸಿಡಬ್ಲ್ಯೂ ಕೌನ್ಸಿಲರ್ ಇಂಟರ್ ಪ್ರಿಟರ್ ಸಹಾಯದಿಂದ ಮಹಿಳೆಯೊಂದಿಗೆ ಸಂವಹನ ನಡೆಸಿದ ನಂತರ ಆರೋಪಿ ಬಗ್ಗೆ ಸಂತ್ರಸ್ತೆ ಮಾಹಿತಿ ನೀಡಿದ್ದಾಳೆ.. ಮಹಿಳೆಯ ದೂರಿನ್ವಯ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಲಾಗಿದೆ..








