ತಂದೆ ಬೈದರೆಂದು 21 ಕಬ್ಬಿಣದ ಮೊಳೆಗಳನ್ನ ನುಂಗಿದ ಅಪ್ರಾಪ್ತ..!
ಮಧ್ಯಪ್ರದೇಶ : ಅಪ್ರಾಪ್ತ ಬಾಲಕನೊಬ್ಬ ತಂದೆ ಬೈಗುಳದಿಂದ ಮನನೊಂದು 21 ಕಬ್ಬಿಣದ ಮೊಳೆಗಳನ್ನ ನುಂಗಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ..
ಧನಂಜಯ ಎಂಬ 17 ವರ್ಷದ ಹುಡುಗ ಈ ರೀತಿ ಮೊಳೆಗಳನ್ನ ನುಂಗಿದ್ದಾನೆ.. ಈತನನ್ನು ತಂದೆ ಯಾವುದೋ ಕಾರಣಕ್ಕೆ ಬೈದಿದ್ದಾರೆ. ಇದ್ರಿಂದ ಮನನೊಂದು ಮೊಳೆಗಳನ್ನ ನುಂಗಿದ್ದಾನೆ.. ಇದಾದದ ಬಳಿಕ ಆತನಿಗೆ ಪ್ರತಿದಿನ ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಬೆನ್ನಲ್ಲೇ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಹುಡುಗನನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಸ್ಕ್ಯಾನಿಂಗ್ ಮಾಡಿಸಿದಾಗ ವೈದ್ಯರೇ ದಂಗಾಗಿದ್ದಾರೆ.. ಕೂಡಲೇ ಪೋಷಕರ ಒಪ್ಪಿಗೆ ಮೇರೆಗೆ ಆಪರೇಷನ್ ಮಾಡಿ ಮೊಳೆಗಳನ್ನು ಹೊರತೆಗೆದಿದ್ದಾರೆ.. ಸದ್ಯ ಅಪ್ರಾಪ್ತ ಹುಡುಗ ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ..








