ಕೋವಿಡ್ : ದೇಶದಲ್ಲಿ 8,439 ಪ್ರಕರಣಗಳು ಪತ್ತೆ
ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 8,439 covid19 ಪ್ರಕರಣಗಳು ಪತ್ತೆಯಾಗಿವೆ.
195 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,46,33,255 ಕ್ಕೆ ತಲುಪಿದೆ.
ಸೋಂಕಿನಿಂದ ಮೃತರಾದವರ ಸಂಖ್ಯೆ 4,73,952 ಕ್ಕೆ ತಲುಪಿದೆ.
ರಾಷ್ಟ್ರೀಯ ಚೇತರಿಕೆ ದರವು ಪ್ರಸ್ತುತ 98.36 ಪ್ರತಿಶತದಷ್ಟಿದೆ. ಇದು ಮಾರ್ಚ್ 2020 ರಿಂದ ಅತಿ ಹೆಚ್ಚು.
ಕಳೆದ 24 ಗಂಟೆಗಳಲ್ಲಿ ಕೋವಿಡ್ ನಿಂದ 9,525 ಗುಣಮುಖರಾಗಿದ್ದಾರೆ.
ಈವರೆಗೆ 34,070,299 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 93,733 ಕ್ಕೆ ಇಳಿಕೆಯಾಗಿದೆ.