ಆ ವಿಚಾರದಲ್ಲಿ ವಿರಾಟ್ ಕೊಹ್ಲಿ ಕಿಂಗ್ ಅಲ್ಲವೇ ಅಲ್ಲ.. Virat Kohli saakshatv
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ನ ರಾಕ್ಷಸ. ಟೀಮ್ ಇಂಡಿಯಾದ ಯಶಸ್ವಿ ನಾಯಕ. ಸಹ ಆಟಗಾರರ ನೆಚ್ಚಿನ ಸ್ನೇಹಿತ.. ಕ್ರಿಕೆಟ್ ದುನಿಯಾದ ರನ್ ಮಾಂತ್ರಿಕ. ದಾಖಲೆಗಳ ಸರದಾರ.. ಆಧುನಿಕ ಕ್ರಿಕೆಟ್ ನ ಅತ್ಯಬ್ಧುತ ಆಟಗಾರ. ಹೀಗೆ ವಿರಾಟ್ ಕೊಹ್ಲಿಯವರನ್ನು ಬಣ್ಣಿಸಲು ಹೊರಟ್ರೆ ಸಾಕಷ್ಟಿದೆ.
ಆದ್ರೆ ಇಷ್ಟೆಲ್ಲಾ ದಾಖಲೆ, ಸಾಧನೆಗಳನ್ನು ಮಾಡಿರುವ ಕಿಂಗ್ ಕೊಹ್ಲಿ ಟಾಸ್ ವಿಚಾರದಲ್ಲಿ ಮಾತ್ರ ನತದೃಷ್ಟ..
ಅದು ಅಂತಾರಾಷ್ಟ್ರೀಯ ಕ್ರಿಕೆಟ್ ಇರಲಿ.. ಐಪಿಎಲ್ ಟೂರ್ನಿ ಇರಲಿ. ಭಾರತದಲ್ಲಾಗಿರಲಿ.. ವಿದೇಶದಲ್ಲಿಲ್ಲಾಗಿರಲಿ ವಿರಾಟ್ ಕೊಹ್ಲಿ ಪಾಲಿಗೆ ಟಾಸ್ ಎಂದೂ ಕೈ ಹಿಡಿದಿಲ್ಲ. ವಿರಾಟ್ ಕೊಹ್ಲಿಯ ಮೇಲೆ ದ್ವೇಷ ಸಾಧಿಸುತ್ತಿರುವಂತೆ ಟಾಸ್ ಯಾವಾಗಲೂ ಕೊಹ್ಲಿ ವಿರುದ್ಧವಾಗಿಯೇ ಇರುತ್ತದೆ. ಆದ್ಯಾಗಿಯೂ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಆಗಾಗ ವಿರಾಟ್ ಟಾಸ್ ವಿನ್ ಆಗುತ್ತಾರೆ. ವಿರಾಟ್ ಕೊಹ್ಲಿ ಟಾಸ್ ಸೋಲುವುದನ್ನ ನೆಟ್ಟಿಗರು ಪ್ರತಿ ಬಾರಿ ಟ್ರೋಲ್ ಮಾಡುತ್ತಾರೆ. ಪ್ರತಿ ಬಾರಿ ಟಾಸ್ ಸೋತಾಗಲೂ ವಿರಾಟ್ ಅಯ್ಯೋ ಕರ್ಮವೇ ಎಂಬಂತೆ ನಗುತ್ತಲೇ ಇರುತ್ತಾರೆ. ಹೀಗಾಗಿ ವಿರಾಟ್ ಎಂದೂ ಟಾಸ್ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಇತ್ತೀಚೆಗೆ ವಿರಾಟ್ ಟಾಸ್ ಗೆ ಬಂದರೂ ಹೊಸ ಭರವಸಯನ್ನ ಇಟ್ಟುಕೊಳ್ಳುವುದಿಲ್ಲ. ಅದೇ ರೀತಿ ಮೊನ್ನೆ ಮುಂಬೈ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಟಾಸ್ ಬಗ್ಗೆ ನಿರುತ್ಸಾಹವನ್ನೇ ಹೊಂದಿದ್ದರು. ಆದ್ರೆ ಅಪರೂಪಕ್ಕೆ ಎಂಬಂತೆ ಅಂದು ವಿರಾಟ್ ಟಾಸ್ ವಿನ್ ಆದ್ರು. ಆಗ ಇಡೀ ಸ್ಟೇಡಿಯಂ ವಿರಾಟ್ ಅಂತ ಕೂಗಿತ್ತು. ವಿರಾಟ್ ಕೂಡ ಮುಗುಳ್ನಕ್ಕಿದ್ದರು.
ಅಂದಹಾಗೆ ಕೊಹ್ಲಿಯ ಟಾಸ್ ಸೋಲು-ಗೆಲುವಿನ ಶೇಕಡಾವಾರು ಪ್ರಮಾಣವನ್ನು ನೋಡಿದಾಗ, ಅತ್ಯಂತ ಕೆಟ್ಟ ದಾಖಲೆಯನ್ನ ಹೊಂದಿದ್ದಾರೆ. ಅದು ಯಾವ ಮಟ್ಟಿಗೆ ಅಂದರೇ ಕ್ರಿಕೆಟ್ ಇತಿಹಾಸದಲ್ಲೇ ಟಾಸ್ ವಿಚಾರವಾಗಿ ಯಾವ ನಾಯಕನೂ ಅಂತಹ ಕೆಟ್ಟ ದಾಖಲೆಯನ್ನು ಹೊಂದಿಲ್ಲ. ಅಷ್ಟರಮಟ್ಟಿಗೆ ವಿರಾಟ್ ಟಾಸ್ ಸೋತಿದ್ದಾರೆ. ವಿರಾಟ್ ನಾಯಕದಾಗಿನಿಂದಲೂ ಇಲ್ಲಿಯವರೆಗೂ 40 ಪ್ರತಿಶತದಷ್ಟು ಟಾಸ್ ಗೆದ್ದಿದ್ದಾರೆ. ಈ ಲೆಕ್ಕದಲ್ಲಿ ರಾಹುಲ್ ದ್ರಾವಿಡ್ ಅವರ ದಾಖಲೆ ಅತ್ಯುತ್ತಮವಾಗಿದೆ. ಅವರ ಟಾಸ್ ಗೆಲುವಿನ ಶೇಕಡಾ 58-60ರಷ್ಟಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ಕೊಹ್ಲಿ ಇದುವರೆಗೆ 66 ಪಂದ್ಯಗಳಲ್ಲಿ 28 ಬಾರಿ ಟಾಸ್ ವಿನ್ ಆಗಿದ್ದರೇ 37 ಬಾರಿ ಟಾಸ್ ಸೋತಿದ್ದಾರೆ. ಏಕದಿನ ಪಂದ್ಯಗಳ ವಿಷಯಕ್ಕೆ ಬಂದರೇ ವಿರಾಟ್ 95 ಮ್ಯಾಚ್ ಗಳಲ್ಲಿ 40 ಬಾರಿ ಟಾಸ್ ಗೆದ್ದಿದ್ದಾರೆ. 55 ಬಾರಿ ಟಾಸ್ ಸೋತಿದ್ದಾರೆ.
ಇನ್ನು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 332 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 158 ಬಾರಿ ಟಾಸ್ ಗೆದ್ರೆ, 174 ಬಾರಿ ಟಾಸ್ ಸೋತಿದ್ದಾರೆ. ಇನ್ನೊಬ್ಬ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ 221 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದ್ರಲ್ಲಿ ಅಜರುದ್ದೀನ್ 125 ಬಾರಿ ಟಾಸ್ ಗೆದ್ರೆ, 96 ಬಾರಿ ಟಾಸ್ ಸೋತಿದ್ದಾರೆ.
ಟೀಮ್ ಇಂಡಿಯಾದ ರೂವಾರಿ ಸೌರವ್ ಗಂಗೂಲಿ 195 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 95 ಬಾರಿ ಟಾಸ್ ಗೆದ್ರೆ, 100 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ.









