ಟೀಂ ಇಂಡಿಯಾಗೆ ಶಾಕ್.. ನಾಲ್ಕು ಆಟಗಾರರು ಔಟ್ Team India saaksha tv
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಮಯ ಸಮೀಪಿಸುತ್ತಿದ್ದಂತೆ ಟೀಂ ಇಂಡಿಯಾಗೆ ಭಾರೀ ಆಘಾತ ಎದುರಾಗಿದೆ. ನಾಲ್ವರು ಪ್ರಮುಖ ಆಟಗಾರರು ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆಗಳಿವೆ.
ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಯುವ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಗಾಯದ ಸಮಸ್ಯೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಇವರ ಜೊತೆಗೆ ಅಕ್ಷರ್ ಪಟೇಲ್ ಮತ್ತು ಇಶಾಂತ್ ಶರ್ಮಾ ಕೂಡ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂಗವಾಗಿ ನಡೆದ ಕಾನ್ಪುರ ಪಂದ್ಯದಲ್ಲಿ ಜಡೇಜಾ ಬಲ ಮುಂಗೈಗೆ ಗಾಯ ಮಾಡಿಕೊಂಡಿದ್ದಾರೆ.
ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಗಾಯ ತೀವ್ರ ಸ್ವರೂಪ ಪಡೆದುಕೊಂಡಿರುವುದರಿಂದ ಅವರಿಗೆ ವಿಶ್ರಾಂತಿ ಅವಶ್ಯಕ ಎಂದಿದ್ದಾರೆ ವೈದ್ಯರು. ಹೀಗಾಗಿ ಸರ್ ಜಡೇಜಾ ಆಫ್ರಿಕಾ ಟೂರ್ ಗೆ ಹೋಗೋದು ಅನುಮಾನವಾಗಿದೆ.
ಮತ್ತೊಂದೆಡೆ, ಪಕ್ಕೆಲುಬು ನೋವಿನಿಂದ ಬಳಲುತ್ತಿರುವ ಹಿರಿಯ ವೇಗಿ ಇಶಾಂತ್ ಶರ್ಮಾ ಕೂಡ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ. ಅವರ ಜಾಗದಲ್ಲಿ ಹೈದರಾಬಾದಿ ಎಕ್ಸ್ ಪ್ರೆಸ್ ಮೊಹ್ಮದ್ ಸಿರಾಜ್ ಕಾಣಿಸಿಕೊಳ್ಳಲಿದ್ದಾರೆ.
ಇತ್ತ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ ಕೀಲು ನೋವಿನಿಂದ ಬಳಲುತ್ತಿದ್ದಾರೆ. ಅವರು ಆರು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಹೀಗಾಗಿ ಅಕ್ಸರ್ ಪಟೇಲ್ ಕೂಡ ಆಫ್ರಿಕಾ ವಿಮಾನ ಹೇರೋದು ಡೌಟ್. ಒಂದು ವೇಳೆ ಜಡೇಜಾ ಮತ್ತು ಅಕ್ಷರ್ ಪಟೇಲ್ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದರೇ ಅಶ್ವಿನ್ ಜೊಡಿಯಾಗಿ ಯಾರು ಆಯ್ಕೆ ಆಗಲಿದ್ದಾರೆ ಅನ್ನೋ ಕುತೂಹಲ ಮೂಡಿದೆ.
ಇನ್ನು ಮುಂಬೈ ಟೆಸ್ಟ್‌ನಲ್ಲಿ ಆರಂಭಿಕ ಶುಭ್ ಮನ್ ಗಿಲ್ ಅವರ ಮಧ್ಯದ ಬೆರಳಿಗೆ ಗಾಯವಾಗಿದ್ದು, ಅವರೂ ತಂಡದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಆಯ್ಕೆ ವಿಳಂಬವಾಗುವ ಸಾಧ್ಯತೆ ಇದೆ.