ಪ್ರೋಮೋಬೋಟ್, ರೋಬೋಟ್ ಉತ್ಪಾದನಾ ಕಂಪನಿಯು ಕಂಡು ಹಿಡಿಯುತ್ತಿರುವ ಹೊಸ ಹುಮನಾಯ್ಡ್ ರೋಬೋಟ್ಗೆ ಹೊಸ ಮುಖ ಮತ್ತು ಧ್ವನಿ ನೀಡುವ ಅಭ್ಯರ್ಥಿಗಳನ್ನ ಹುಡುಕುತ್ತಿದೆ.
ರೊಬೊಟಿಕ್ಸ್ ಕಂಪನಿಯು ಹೋಟೆಲ್ಗಳು, ಮಾಲ್ಗಳು ಮತ್ತು ಇತರ “ಜನಸಂದಣಿ ಇರುವ ಸ್ಥಳಗಳಲ್ಲಿ” ಬಳಸಲು ಹುಮನಾಯ್ಡ್ ರೋಬೋಟ್ನ್ನ ತಯಾರಿಸುತ್ತಿದೆ. ಇದಕ್ಕಾಗಿ ರೋಬೋಟ್ ಗೆ ಸೂಕ್ತವಾಗುವ ಮುಖ ಮತ್ತು ಧ್ವನಿಗಾಗಿ ವ್ಯಕ್ತಿಗಳಿಗಾಗಿ ಕಂಪನಿ ಅರ್ಜಿ ಅಹ್ವಾನಿಸಿದೆ. ಇದಕ್ಕಾಗಿ ಕಂಪನಿ 1.5 ಕೋಟಿ ಪಾವತಿಸಲು ಮುಂದಾಗಿದೆ ಎಂದು ಕಂಪನಿಯ ಸುದ್ದಿ ಬಿಡುಗಡೆ ಮಾಡಿದೆ.
ಪ್ರೊಮೊಬಾಟ್ ಈಗಾಗಲೇ 20,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ,
“ಪ್ರಮೋಬೋಟ್ ಕಂಪನಿಯು ಯೋಜನೆಯಲ್ಲಿ ಭಾಗವಹಿಸಲು ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತದೆ. ಇಂದು ನಾವು 20,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದೇವೆ ನಾವು ಮುಂಬರುವ ಹೆಚ್ಚಿನ ಪ್ರಾಜೆಕ್ಟ್ಗಳನ್ನು ಹೊಂದಿದ್ದೇವೆ. ನಮ್ಮ Instagram ಗೆ ಚಂದಾದಾರರಾಗಿ ಮತ್ತು ಟ್ಯೂನ್ ಆಗಿರಿ” ಎಂದು Promobot ಕಂಪನಿ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಪರಿಪೂರ್ಣ ಅಭ್ಯರ್ಥಿಯನ್ನು ನಿರ್ಧರಿಸಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಕಂಪನಿಯು ತಿಳಿಸಿದೆ.








