ಬೆಂಗಳೂರು : ಮೇ 15ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬ. ಅಂದು ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿಗೆ ವಿಶ್ ಮಾಡಲು ಬೆಂಗಳೂರಿನ ಡಿಕೆ ನಿವಾಸದ ಬಳಿ ಜಮಾಯಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೈ ಕಾರ್ಯಕರ್ತರಿಗೆ ಕಾಂಗ್ರೆಸ್ ಅಧ್ಯಕ್ಷ “ಮೇ 15ರಂದು ನಾನು ಊರಲ್ಲಿ ಇರುವುದಿಲ್ಲ, ಜನ್ಮದಿನದ ಶುಭಾಶಯ ಕೋರಲು ಯಾರೂ ಬರಬಾರದೆಂದು ಮನವಿ ಮಾಡಿದ್ದಾರೆ.
“ಅನಿವಾರ್ಯ ಕಾರಣಗಳಿಂದ ಮೇ 14 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಇರುವುದಿಲ್ಲ. ನಾಯಕರಾಗಲಿ, ಪಕ್ಷದ ಕಾರ್ಯಕರ್ತರಾಗಲಿ, ಅಭಿಮಾನಿ ಬಂಧುಗಳಾಗಲಿ, ಕನಕಪುರ ಕ್ಷೇತ್ರದವರಾಗಲಿ ಯಾರೂ ಕೂಡ ಸದಾಶಿವನಗರ ನಿವಾಸಕ್ಕಾಗಲಿ, ಪಕ್ಷದ ಕಚೇರಿಗಾಗಲಿ ಬರುವುದು ಬೇಡ. ಯಾರೂ ಇದನ್ನು ತಪ್ಪಾಗಿ ಭಾವಿಸಬಾರದು ಎಂದು ಶಿವಕುಮಾರ್ ವಿನಂತಿ ಮಾಡಿದ್ದಾರೆ.








