ಸೇನಾ ಹೆಲಿಕಾಪ್ಟರ್ ಪತನ – ಏರ್ ಮಾರ್ಷಲ್ ನೇತೃತ್ವದಲ್ಲಿ ತನಿಖೆ
ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಸಲು ಭಾರತೀಯ ವಾಯುಪಡೆ ಆದೇಶಿಸಿದೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಈ ಸಂಬಂಧ ಹೇಳಿಕೆ ನೀಡಿದರು
ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪಾರ್ಥಿವ ಶರೀರವನ್ನು ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಘೋಷಿಸಿದರು. ನಿನ್ನೆ ಬೆಳಗ್ಗೆ 11.48ಕ್ಕೆ ಸೋಲೂರು ವಾಯು ನೆಲೆಯಿಂದ ಹೊರಟಿದ್ದ ವಾಯುಪಡೆಯ ಎಂಐ 17 – ವಿ 5 ಹೆಲಿಕಾಪ್ಟರ್, 12.15ಕ್ಕೆ ವೆಲ್ಲಿಂಗ್ಟನ್ ನಲ್ಲಿ ಇಳಿಯಬೇಕಾಗಿತ್ತು; ಆದರೆ ಈ ನಡುವೆ ಸೋಲೂರು ವಾಯುನೆಲೆಯ ಸಂಪರ್ಕ ಕಡಿದುಕೊಂಡು ಹೆಲಿಕಾಪ್ಟರ್ ಪತನಗೊಂಡಿದೆ;
ಸಭಾದ್ಯಕ್ಷ ಓಂ ಬಿರ್ಲಾ, ಜನರಲ್ ಬಿಪಿನ್ ರಾವತ್ ಹಾಗೂ ಇತರ ಸೇನಾ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿ ಸಂತಾಪ ಸೂಚಿಸಿದರು. ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟವರ ಗೌರವಾರ್ಥ ಲೋಕಸಭೆ ಎರಡು ನಿಮಿಷ ಮೌನ ಆಚರಿಸಿತು.







