ಮೆಕ್ಸಿಕೋದಲ್ಲಿ ಭಾರಿ ಟ್ರಕ್ ಅಪಘಾತ – 53 ಕ್ಕೂ ಹೆಚ್ಚು ಮಂದಿ ಸಾವು
ಅಮೆರಿಕನ್ ವಲಸಿಗರನ್ನ ಹೊತ್ತು ಸಾಗಿಸುತ್ತಿದ್ದ ಸರಕು ಸಾಗಾಣೆ ಟ್ರಕ್ ಅಪಘಾತಕ್ಕೆ ಈಡಾಗಿ 53 ಮಂದಿ ಸಾವನ್ನಪ್ಪಿದ್ದು 21ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮೆಕ್ಸಿಕೋ ದೇಶದಲ್ಲಿ ನಡೆದಿದೆ. ದಕ್ಷಿಣಾ ಮೆಕ್ಸಿಕೋದ ಹೆದ್ದಾರಿ ಸೇತುವೆಯಿಂದ ಪಾದಾಚಾರಿ ಮಾರ್ಗಕ್ಕೆ ಉರುಳಿಬಿದ್ದಿದೆ.
ಚಿಯಾಪಾಸ್ ರಾಜ್ಯದ ಟಕ್ಸಾಟ್ಲಾ ಕಡೆಗೆ ಈ ಟ್ರಕ್ ಕಡೆಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ಇವರೆಲ್ಲರೂ ಮಧ್ಯ ಅಮೇರಿಕಾದ ವಲಸಿಗರು ಎಂದು ಹೇಳಲಾಗುತ್ತಿದೆ ಆದರೆ ಅಲ್ಲಿನ ಸರ್ಕಾರ ಇವರ ರಾಷ್ಟ್ರೀಯತೆಯನ್ನ ಬಹಿರಂಗ ಪಡಿಸಿಲ್ಲ.
ಟ್ರಕ್ ನಲ್ಲಿ ಅತಿಯಾಗಿ ಜನರನ್ನ ತುರುಕಿದ್ದರಿಂದ ಓವರ್ ಲೋಡ್ ಆಗಿ ರಸ್ತೆ ತಿರುವಿನಲ್ಲಿ ಗಾಡಿ ಟರ್ನ್ ಮಾಡಲು ಸಾಧ್ಯವಾಗದೆ ಮೇಲಿನಿಂದ ಉಕ್ಕಿನ ಕಂಬಿ ಇದ್ದ ಪಾದಾಚಾರಿ ಮಾರ್ಗಕ್ಕೆ ಬಿದ್ದಿದ್ದ, ಇವರೆಲ್ಲರು ಅಕ್ರಮವಾಗಿ ಗಡಿಯಲ್ಲಿ ನುಸುಳಿಕೊಂಡು ಬಂದಿದ್ದರು ಎನ್ನಲಾಗಿದೆ.
ಹಾಗಾಗಿ ಅಪಘಾತದಲ್ಲಿ ಗಾಯಗೊಂಡರೂ ಪೊಲೀಸರನ್ನ ನೋಡಿದ ತಕ್ಷಣ ಓಡಿಹೋಗಿದ್ದಾರೆ. ಗಾಯದಲ್ಲಿ ಗಂಭೀರ ಗಾಯಗೊಂಡವರಿಗೆ ಮೆಕ್ಸಿಕೋ ರಾಜಧಾನಿಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ, ಅವರನ್ನ ಅಕ್ರಮ ವಲಸೆ ಅಪರಾಧದ ಸಾಕ್ಷಿ ಎಂದು ಪರಿಗಣಿಸಲಾಗಿದೆ.








