ಸಿಖ್ ವಿರೋಧಿ ಹೇಳಿಕೆ ನೀಡಿದ್ದ ‘ಕ್ವೀನ್’ ಗೆ ಸಂಕಷ್ಟ : ತಮ್ಮ ವಿರುದ್ಧದ ಕೇಸ್ ಖುಲಾಸೆಗೆ ಹೈಕೋರ್ಟ್ ಮೊರೆ
ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಒಬ್ಬರಲ್ಲಾ ಒಬ್ಬರ ವಿರುದ್ಧ ಆರೋಪಗಳನ್ನ ಮಾಡುತ್ತಾ , ವಿವಾದಗಳನ್ನ ಮೈಮೇಲೆ ಎಳೆದುಕೊಂಡು ಸುದ್ದಿಯಲ್ಲೇ ಇರುವ ಬಾಲಿವುಡ್ ನಟಿ ಕಂಗನಾ ರಣೌತ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಸಿಖ್ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ರೈತರ ಪ್ರತಿಭಟನೆಯನ್ನು ‘ಖಾಲಿಸ್ತಾನಿ ಚಳುವಳಿ’ ಎಂದು ಟೀಕಿಸಿದ್ದರು.
ಕಂಗನಾ ನೀಡಿದ್ದ ಈ ಹೇಳಿಕೆಯ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು.. ಮುಂಬೈ ಹಾಗು ದೆಹಲಿಯ ಗುರುದ್ವಾರವನ್ನು ಪ್ರತಿನಿಧಿಸುವ ವಕೀಲರ ಗುಂಪು ಮುಂಬೈನಲ್ಲಿ ಕಂಗನಾ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಕಂಗನಾ ವಿರುದ್ಧ FIR ದಾಖಲಿಸಲಾಗಿತ್ತು. ಈಗ ಕಂಗನಾ ಈ ಕೇಸ್ ಅನ್ನು ಖುಲಾಸೆಗೊಳಿಸುವಂತೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಂಗನಾ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿದ್ದ FIR ಅನ್ನು ಪ್ರಶ್ನಿಸಿ ಕಂಗನಾ ರನೌತ್ ಬಾಂಬೆ ಹೈಕೋರ್ಟ್ ಮೊರೆಹೋಗಿದ್ದಾರೆ. ಕಂಗನಾ ವಿರುದ್ಧ ನೀಡಿದ ದೂರಿನ ಅನ್ವಯ ಮುಂಬೈ ಪೊಲೀಸರು IPC ಸೆಕ್ಷನ್ 295/A ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಕೇಸ್ ದಾಖಲಿಸಿಕೊಂಡಿದ್ದರು. ಈ ದೂರನ್ನು ಪ್ರಶ್ನಿಸಿ, ಕಂಗನಾ ಪರ ವಕೀಲ ರಿಜ್ವಾನ್ ಸಿದ್ಧಿಕಿ ಮೇಲ್ಮನವಿ ಸಲ್ಲಿಸಿದ್ದಾರೆ.
https://www.instagram.com/tv/CXBNzo5lr7y/?utm_source=ig_web_copy_link
ಈ ಮನವಿಯಲ್ಲಿ ‘ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಚಲಾಯಿಸಿದ್ದಕ್ಕೆ ಕಂಗನಾ ರನೌತ್ ರನ್ನು ಉದ್ದೇಶಪೂರ್ವಕವಾಗಿ ಕಾನೂನು ಕ್ರಮ ಜರುಗಿಸಲಾಗಿದೆ. ಇದು ಕೃತ್ಯವಲ್ಲದೆ ಬೇರೇನೂ ಅಲ್ಲ’. ಎಂದು ಮೇಲ್ಮನವಿಯಲ್ಲಿ ಹೇಳಲಾಗಿದೆ.
ಮುಂಬೈ ಹಾಗೂ ದೆಹಲಿಯ ವಿವಿಧ ಗುರುದ್ವಾರದ ಸದಸ್ಯರು ಆಗಿರುವ ವಕೀಲರು ಕಂಗನಾ ವಿರುದ್ಧ ದೂರು ದಾಖಲಿಸಿದ್ದರು. ಅಮರ್ ಜಿತ್ ಸಿಂಗ್, ಕುಲ್ವಂತ್ ಸಿಂಗ್ ಸಂದು, ಮಂಜಿಂದರ್ ಸಿಂಗ್ ಸಿರ್ಸ ಹಾಗೂ ಜಸ್ ಪಾಲ್ ಸಿಂಗ್ ಸಿದ್ಧು ಎಂಬುವವರು ಕಂಗಾನ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಗುರುದ್ವಾರ ನಿರ್ವಹಣಾ ಸಮಿತಿಯಿಂದಲೂ ಕೆಲ ದಿನಗಳ ಹಿಂದೆ ದೂರು ಸಲ್ಲಿಕೆಯಾಗಿತ್ತು. ಮಂದಿರ್ ಮಾರ್ಗ್ ಠಾಣೆಯಲ್ಲಿ ಸಿಖ್ ಸಮಿತಿಯಿಂದ ದೂರು ದಾಖಲಿಸಲಾಗಿತ್ತು.








