ಮೆಕ್ಸಿಕೋ : ಅಕ್ರಮವಾಗಿ ವಲಸಿಗರನ್ನ ಸಾಗಿಸುತ್ತಿದ್ದ ಟ್ರಕ್ ಪಲ್ಟಿ : 54 ಮಂದಿ ಸಾವು, 52 ಜನರಿಗೆ ಗಾಯ
ಮೆಕ್ಸಿಕೋ : ಅಕ್ರಮವಾಗಿ ವಲಸಿಗರನ್ನು ಸಾಗುತ್ತಿದ್ದ ಟ್ರಕ್ ಒಂದು ಪಲ್ಟಿಯಾಗಿ 54 ಮಂದಿ ಮೃತಪಟ್ಟಿದ್ದು , 52 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಮೆಕ್ಸಿಕೋದಲ್ಲಿ ನಡೆದಿದೆ. ಗಾಯಾಳುಗಳ ಪೈಕಿ ಅನೇಕರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ..
ರಾಜ್ಯ ನಾಗರಿಕ ರಕ್ಷಣಾ ಕಚೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆನೊ ಅವರು ಘಟನೆ ಬಗ್ಗೆ ,ಆಹಿತಿ ನೀಡಿದ್ದು , 54 ಮಂದಿ ಸಾವನ್ನಪ್ಪಿದ್ದು 52 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿಯೂ 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಧ್ಯ ಅಮೆರಿಕದಿಂದ ಬಂದ ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಈ ಘಟನೆ ಸಂಭಮವಿಸಿದೆ. ಚಿಯಾಪಾಸ್ ನ ಟಕ್ಸ್ಟ್ಲಾ ಗುಟೈರೆಜ್ ಕಡೆಗೆ ತೆರಳುವಾಗ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಆದ್ರೆ ಮೃತರನ್ನು ತಮ್ಮ ರಾಷ್ಟ್ರದವರೆಂದು ಅಲ್ಲಿನ ಸರ್ಕಾರ ದೃಢಪಡಿಸಿಲ್ಲ. ಅಪಘಾತದಲ್ಲಿ ಬದುಕುಳಿದಿರುವ ಕೆಲವರನ್ನು ನೆರೆಯ ದೇಶವಾದ ಗ್ವಾಟೆಮಾಲಾದಿಂದ ಬಂದವರು ಎಂದು ಮೊರೆನೊ ಹೇಳಿದ್ದಾರೆ.
ಟ್ರಕ್ನಲ್ಲಿ ಬಹಳಷ್ಟು ಜನ ಇದ್ದಿದ್ದರಿಂದ ಹೆಚ್ಚಿನ ಭಾರ ತಡೆಯಲಾಗದೇ ಪಲ್ಟಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಘಟನೆ ವೇಳೆ 107 ಮಂದಿ ಟ್ರಕ್ ನಲ್ಲಿದ್ದರು ಎನ್ನಲಾಗಿದೆ. ದಕ್ಷಿಣ ಮೆಕ್ಸಿಕೋದಲ್ಲಿ ಸರಕು ಸಾಗಣೆ ಟ್ರಕ್ಗಳಲ್ಲಿ ವಲಸಿಗರ ಕಳ್ಳಸಾಗಣೆ ಮಾಡಲಾಗುತ್ತಿತ್ತು.. ಅಲ್ಲದೇ ಇಂತಹ ಪ್ರಕರಣಗಳು ಅಲ್ಲಿ ಸಾಮಾನ್ಯವೆಂಬಂತಾಗಿದೆ.. ಇನ್ನೂ ಘಟನೆ ನಡೆದಾಗ ಅನೇಕ ವಲಸಿಗರು ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ..








