ʻಪುಷ್ಪʼ ಟೀಂಗೆ ʻಭರ್ಜರಿ ಗಿಫ್ಟ್ʼ ನೀಡಿದ ʻಅಲ್ಲು ಅರ್ಜುನ್ʼ
ಬಹು ನೀರಿಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ʻಪುಷ್ಪʼ ಭಾರಿ ನಿರೀಕ್ಷೆಯೊಂದಿಗೆ ಮುಂದಿನ ವಾರ (ಡಿ.17) ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಇದರಿಂದ ಖುಷಿಯಾಗಿರೋ ಚಿತ್ರದ ನಾಯಕ ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರದ ಕೋರ್ ಟೀಂನಲ್ಲಿದ್ದ 40 ಜನರಿಗೆ ತಲಾ ಒಂದು ತೊಲೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಇದೇ ವೇಳೆ ಚಿತ್ರದ ಪ್ರೊಡಕ್ಷನ್ ತಂಡದಲ್ಲಿ ಕೆಲಸ ಮಾಡಿದವರಿಗೆ ಒಟ್ಟು 10 ಲಕ್ಷ ರೂಪಾಯಿಗಳನ್ನು ನೀಡಿ ಚಿತ್ರದ ಶೂಟಿಂಗ್‌ಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
2021ನೇ ಸಾಲಿನಲ್ಲಿ – ವಿಶ್ವದ ನಂ 1 ನಟ ಪ್ರಭಾಸ್
ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಾಹದ್ ಫಾಸಿಲ್, ಸುನೀಲ್, ಅನಸೂಯ, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಭಾರಿ ತಾರಾಗಣವಿದೆ. ಐಟಂ ಸಾಂಗ್‌ನಲ್ಲಿ ಸಮಂತಾ ಅಭಿನಯಿಸಿದ್ದು ಇದು ಚಿತ್ರದ ಸ್ಪೆಷಲ್ ಅಟ್ರ್ಯಾಕ್ಷನ್ ಆಗಿದೆ. ‘ಪುಷ್ಪ’ ಡಿಸೆಂಬರ್ 17 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರಲಿದೆ.








